ಸ್ವದೇಶೀ ನಿರ್ಮಿತ ಕೊರೊನಾ ಲಸಿಕೆ ಕೋವಿಶೀಲ್ಡ್ ದರದಲ್ಲಿ 100 ರೂ. ಕಡಿತ ಮಾಡಿ ಸೆರಂ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ಘೋಷಣೆ ಮಾಡಿದೆ.
ಮಹಾರಾಷ್ಟ್ರದ ಪುಣೆಯಲ್ಲಿರುವ ಸೆರಂ ಇನ್ಸಿಟಿಟ್ಯೂಟ್ ಬುಧವಾರ ರಾಜ್ಯ ಸರಕಾರಗಳಿಗೆ ನಿಗದಿಪಡಿಸಲಾಗಿದ್ದ 400 ರೂ. ಶುಲ್ಕವನ್ನು 300 ರೂ.ಗೆ ಇಳಿಸಿದೆ.
ದೇಶದಲ್ಲಿ ಕೊರೊನಾ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ದೊಡ್ಡ ಮೊತ್ತದಲ್ಲಿ ಲಸಿಕೆ ಪಡೆಯಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ದರ ಕಡಿತ ಮಾಡಲಾಗಿದೆ ಎಂದು ಹೇಳಲಾಗಿದೆ.
ಕರ್ನಾಟಕ ರಾಜ್ಯ ಸರಕಾರ ಈಗಾಗಲೇ 1 ಕೋಟಿ ಡೋಜ್ ಖರೀದಿಗೆ ಆರ್ಡರ್ ನೀಡಿದ್ದು, ಕೇಂದ್ರ ಅಲ್ಲದೇ ರಾಜ್ಯ ಸರಕಾರಗಳು ದೊಡ್ಡ ಮಟ್ಟದಲ್ಲಿ ಲಸಿಕೆಗೆ ಆರ್ಡರ್ ಮಾಡಿದೆ. ಮೇ 1ರಿಂದ ದೇಶಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ.