ವಿಜಯನಗರ: ಅಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡು ತಂದೆ ಮಗಳು ಸಜೀವ ದಹನಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಲ್ಲಿ ನಡೆದಿದೆ.
ಮೃತರನ್ನು ಕೃಷ್ಣಪ್ಪ (34) ಮತ್ತು ಆತನ ಮಗಳು ಭೂಮಿಕಾ (11) ಎಂದು ಗುರುತಿಸಲಾಗಿದೆ. ಶೆಡ್ವೊಂದರಲ್ಲಿ ಕೃಷ್ಣಪ್ಪ ಟೀ ಅಂಗಡಿ ನಡೆಸುತ್ತಿದ್ದ ಎನ್ನಲಾಗಿದೆ.
ಇಂದು ಸಂಜೆ ಗ್ಯಾಸ್ ಸ್ಟೋವ್ ಹಚ್ಚಿ ಟೀ ಮಾಡಲು ಇಟ್ಟಿದ್ದಾಗ ಆಕಸ್ಮಿಕವಾಗಿ ಸಿಲಿಂಡರ್ ಸ್ಪೋಟವಾಗಿದ್ದು, ಶೆಡ್ನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಇಬ್ಬರು ಸಜೀವ ದಹನವಾಗಿದ್ದಾರೆ. ಘಟನೆ ಬಗ್ಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.