ಜಾತಿ, ಧರ್ಮಗಳನ್ನು ಮೀರಿದ್ದು ಮಾನವೀಯತೆ. ನಮ್ಮೆಲ್ಲರ ಜಾತಿ ಒಂದೇ. ಅದುವೇ ಮನುಷ್ಯ ಜಾತಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಹೇಳಿದ್ದಾರೆ.
ಪಾದರಾಯನಪುರದ ಅಲ್ ಅಜರ್ ಫೌಂಡೇಶನ್ ಶಾಲೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದವರು. ಇದನ್ನೂ ಓದಿ :- ಸಂಘಪರಿವಾರದವರು ಹುಟ್ಟಿರೋದೆ ಸಮಾಜ ಒಡೆಯಲು – ಸಿದ್ದರಾಮಯ್ಯ
ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ ಎಂದು ವೇದಿಕೆಯ ಮೇಲೆ ದಲಿತ ಸ್ವಾಮೀಜಿಗೆ ಅನ್ನ ತಿನ್ನಿಸಿದ್ರು. ತದನಂತ್ರ ಅವರ ಬಾಯಿಯಲ್ಲಿದ್ದ ಎಂಜಲು ಅನ್ನವನ್ನ ಜಮೀರ್ ತಿಂದಿದ್ದಾರೆ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು. ನಾವೆಲ್ಲರೂ ಸಹೋದರರಂತೆ ಬಾಳಬೇಕು ಎಂದು ಬಿಜೆಪಿ ಜಮೀರ್ ಟಾಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ :- ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ – ಸಲೀಂ ಅಹಮದ್