ಈ ದೇಶ ಒಂದು ಧರ್ಮದವರ ದೇಶ ಅಲ್ಲ.ಎಲ್ಲಾ ಧರ್ಮಕ್ಕೆ ಸೇರಿದವರು ಮೊದಲು ಭಾರತೀಯರು. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವಾಗ ಒಂದು ದೇಶದ ಧರ್ಮ ಎಂದು ಬರೆದಿಲ್ಲ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತುಮಕೂರಿನ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಮಾತನಾಡಿದ ಅವರು ಎಲ್ಲರೂ ತಮಗೆ ನಿಷ್ಠೆ ಇರುವಂತಹ ಧರ್ಮ ಆಚರಣೆಗೆ ಅವಕಾಶ ಇದೆ. ಧರ್ಮದಲ್ಲಿ ನಿಷ್ಠೆ ಇದ್ದು ಪರ ಧರ್ಮವನ್ನು ಗೌರವಿಸುವ ಸಹಿಷ್ಣುತೆ ಇರಬೇಕು. ಪರ ಧರ್ಮದ ಬಗ್ಗೆ ಅಸೂಯೆ ಪಟ್ಟರೆ ನಾವು ಮನುಷ್ಯರಲ್ಲ. ನಾನು ಅಲ್ಪಸಂಖ್ಯಾತರ ಪರ ಮಾತಾಡಿದ್ರೆ ಈ ಸಂಘ ಪರಿವಾರದವು ನನಗೆ ನೀನೇನು ಮುಸ್ಲಿಂ ಜಾತಿಗೆ ಹುಟ್ಟಿದವನಾ ಎಂದು ಕೇಳುತ್ತಾರೆ. ನಾನು ಸಮಾವೇಶದಲ್ಲಿ ಒಡಕು ಮಾಡಲ್ಲ, ಸಾಮರಸ್ಯ ತರುತ್ತೇನೆ.
ಧರ್ಮ ಧರ್ಮಗಳ ನಡವೆ ಗೋಡೆ ಕಟ್ಟುವ ಕೆಲಸ ಸಂಘ ಪರಿವಾರ ಮಾಡುತ್ತಿದೆ. ಅಧಿಕಾರದಲ್ಲಿ ಇರುವ ಸಂವಿಧಾನದ ಆಶಯದಂತೆ ನಡೆಯಬೇಕು. ಸಂಘಪರಿವಾರದವರು ಹುಟ್ಟಿರೋದೆ ಸಮಾಜ ಒಡೆಯಲು. ಹೆಗಡೆ ವಾರ್ ಆರ್ಎಸ್ಎಸ್ ಸಂಸ್ಥಾಪಕ ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಮಾತ್ರ ಹಿಂದೂ ಅಲ್ಲ. ನಾನೂ ಕೂಡ ಹಿಂದು ನನ್ನ ಅಪ್ಪ ಕೂಡ ಹಿಂದು. ಯಾಕೆ ನೀವು ಧರ್ಮ ಜಾತಿ ಹೆಸರಲ್ಲಿ ದ್ವೇಷ ಮಾಡುತ್ತೀರಿ. ಗೋಹತ್ಯೆ ನಿಷೇಧ ಕಾಯಿದೆ ಬದಲಾವಣೆ ಮಾಡಿದ್ರು. ನಾನು ಬಂದಾಗ ಮತ್ತೇ ಮೂಲ ಕಾಯಿದೆಯಂತೆ ಮಾಡಿದೆ. ಗೋ ಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ. ಯಾವುದೇ ಒಂದು ಧರ್ಮದವರು ಮಾತ್ರ ತಿನ್ನುತ್ತಿಲ್ಲ. ಗೋ ಮಾಂಸ ರಪ್ತು ಮಾಡೋರು ಯಾರು. ಸಗಣಿ ಎತ್ತಿಲ್ಲ, ಗಂಜಲ ಎತ್ತಿಲ್ಲ, ಹಸು ಸಾಕಿಲ್ಲ ಅಂಥವರು ಗೋ ರಕ್ಷಣೆ ಮಾಡಲು ಹೊರಟಿದ್ದಾರೆ. ಇದನ್ನೂ ಓದಿ :- ಸಿಎಂ ಇಬ್ರಾಹಿಂ ಅವಕಾಶವಾದಿ ರಾಜಕಾರಣಿ – ಸಲೀಂ ಅಹಮದ್
ಮತಾಂತರ ನಿಷೇಧ ಕಾಯಿದೆ ತರಲು ಹೊರಟಿದ್ದಾರೆ. ಅಂಬೇಡ್ಕರ್ ಮತಾಂತರ ಆದರು. ಹಿಂದೂ ಸಮುದಾಯದಲ್ಲಿ ಅಸಮಾನತೆ ಇದ್ದುದರಿಂದ ಮತಾಂತರ ಆದರು. ಜೆಡಿಎಸ್ ನವರು ಜಾತ್ಯಾತೀತರು ಅಂತಾರೆ. ಈ ಎರಡೂ ಮಸೂದೆಯನ್ನು ಜೆಡಿಎಸ್ನವರು ವಿರೋಧ ಮಾಡಿಲ್ಲ. ಅವರು ಜ್ಯಾತ್ಯಾತೀತರಾ..? ಶಾದಿ ಭಾಗ್ಯ ನಿಲ್ಲಿಸಿದ್ರು. ಟಿಪ್ಪು ಸುಲ್ತಾನ್ ಜಯಂತಿ ಸಿದ್ದರಾಮಯ್ಯ ವೋಟ್ಗಾಗಿ ಮಾಡ್ಬಿಟ್ಟಾ ಅಂತಾರೆ. ಟಿಪ್ಪು ಸುಲ್ತಾನ್ ಮತಾಂಧ ಅಲ್ಲ. ಅವರು ಮತಾಂಧ ಆದರೆ ಹಿಂದು ದೇವಾಲಯಗಳು ಉಳಿದುಕೊಳ್ಳುತಿತ್ತಾ. ಟಿಪ್ಪು ಒಬ್ಬ ಮಹಾನ್ ದೇಶ ಭಕ್ತ ಅನ್ನೋದರಲ್ಲಿ ಅನುಮಾನ ಇಲ್ಲ. ಇವತ್ತು ಬಿಜೆಪಿ ಸರ್ಕಾರ ಹಿಜಾಬ್, ಹಲಾಲ್, ಆಜಾನ್ ವಿಚಾರ ಎತ್ತುತ್ತಿದ್ದಾರೆ. ಅವರ ಹುಳುಕುಗಳನ್ನು ಮುಚ್ಚಲು ಇದನ್ನು ಎತ್ತುತಿದ್ದಾರೆ ಎಂದು ಬಿಜೆಪಿ ವಿರುದ್ದ ಸಿದ್ದರಾಮಯ್ಯ ಕಿಡಿಕಾರಿದ್ರು.
ಇದನ್ನೂ ಓದಿ :- ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ – ಅರವಿಂದ ಬೆಲ್ಲದ್