ಸ್ಯಾಂಡಲ್ ವುಡ್ (Sandalwood) ನಟ ವಸಿಷ್ಠ ಸಿಂಹ (Vasista simha) ಮತ್ತು ಹರಿಪ್ರಿಯಾ (Haripriya) ಇದೇ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನಲ್ಲಿ ತಮ್ಮ ವಿವಾಹ ಸಮಾರಂಭ ನಡೆಸಲು ಇಬ್ಬರು ನಿರ್ಧರಿಸಿದ್ದಾರೆ.
ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ಚಂದನವನದ ಮುದ್ದು ಜೋಡಿಯ ವಿವಾಹ ನಡೆಯಲಿದೆ. ಹರಿಪ್ರಿಯಾ-ವಸಿಷ್ಠ ಅವರು ಆಶ್ರಮಕ್ಕೆ ತೆರಳಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಪ್ರತಾಪ್ ಸಿಂಹ (Pratap simha) ಕೂಡ ಜೊತೆಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಓದಿ :- ಕೆಡಿ ಸಿನಿಮಾದಲ್ಲಿ ರವಿಚಂದ್ರನ್ ಗೆ ಖಡಕ್ ಪಾತ್ರ – ಹೊಸ ವರ್ಷಕ್ಕೆ ರಿವೀಲ್ ಆಯ್ತು ಹೊಸ ಲುಕ್
ಈ ತಾರಾ ಜೋಡಿಗೆ ಕಳೆದ ಡಿಸೆಂಬರ್ 3 ರಂದು ಹರಿಪ್ರಿಯಾ ನಿವಾಸದಲ್ಲಿ ನಿಶ್ಚಿತಾರ್ಥ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದನ್ನು ಓದಿ :- ವೀರ ಕಂಬಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ