ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಪುತ್ರಿ ನೀಡಿದ ಹೇಳಿಕೆಯನ್ನು ಪರಿಗಣಿಸದಂತೆ ಯುವತಿಯ ತಂದೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಎಸ್ ಐಟಿ ಪೊಲೀಸರ ಮುಂದೆ ಯುವತಿ ಹೇಳಿಕೆ ನೀಡಿದ ಬೆನ್ನಲ್ಲೇ ಹೈಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸಿರುವ ತಂದೆ, ಮಗಳ ಹೇಳಿಕೆಯನ್ನು ಸಿಆರ್ ಪಿಸಿ 164ರ ಅಡಿಯಲ್ಲಿ ಪರಿಗಣಿಸದಂತೆ ಮನವಿ ಮಾಡಿದ್ದಾರೆ.
ಮಗಳ ಹೇಳಿಕೆಯಿಂದ ಕುಟುಂಬದ ಗೌರವಕ್ಕೆ ಧಕ್ಕೆ ಬರಲಿದೆ. ಯುವತಿ ಯಾವುದೋ ಒತ್ತಡಕ್ಕೆ ಒಳಗಾದಂತೆ ಹೇಳಿಕೆ ನೀಡಿರುವ ಶಂಕೆ ಇದೆ. ಯುವತಿಯನ್ನು ನಮ್ಮ ವಶಕ್ಕೆ ಅಥವಾ ಕೋರ್ಟ್ ವಶಕ್ಕೆ ನೀಡಬೇಕು. ಯುವತಿ ಹೇಳಿಕೆಯ ಪ್ರತಿ ನಮಗೂ ಕೊಡಿ ಎಂದು ಹೈಕೋರ್ಟ್ ಗೆ ಯುವತಿ ತಂದೆ ಮೊರೆ ಹೋಗಿದ್ದಾರೆ.