ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡಿಕೊಳ್ಳಲು ಪಾಕಿಸ್ತಾನದ ಸರಕಾರ ಸಮ್ಮತಿ ಸೂಚಿಸಿದೆ. ಈ ಮೂಲಕ ಎರಡೂ ದೇಶಗಳ ನಡುವೆ 19 ತಿಂಗಳ ನಂತರ ವ್ಯಾಪಾರ ವಹಿವಾಟು ಆರಂಭವಾಗಲಿದೆ.
ಪಾಕಿಸ್ತಾನದ ನೂತನ ವಿದೇಶಾಂಗ ಸಚಿವ ಹಮ್ಮದ್ ಅಜರ್ ಬುಧವಾರ ಈ ವಿಷಯ ತಿಳಿಸಿದ್ದು, 2021 ಜೂನ್ 30ರಿಂದ ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಆಗಲಿದೆ ಎಂದರು.
ಪಾಕಿಸ್ತಾನ, ಭಾರತದಿಂದ ಆಮದು ನಿಷೇಧಿಸಿ ಸುಮಾರು 2 ವರ್ಷ ಆಗಿತ್ತು. ಇದೀಗ ಭಾರತದ ಖಾಸಗಿ ಸಂಸ್ಥೆಗಳಿಂದ 5 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಳ್ಳಲು ಪಾಕಿಸ್ತಾನದ ಆರ್ಥಿಕ ಸಹಕಾರ ಸಮಿತಿಗೆ ಸೂಚನೆ ನೀಡಲಾಗಿದೆ ಎಂದರು.
ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತದಲ್ಲಿ ಸಕ್ಕರೆ ದರ ಕಡಿಮೆ ಇದೆ. ಅಲ್ಲದೇ ಹತ್ತಿ ಖರೀದಿಸಿದರೆ ದೇಶದಲ್ಲಿನ ಸಣ್ಣ ಹಾಗೂ ಮಧ್ಯಮ ಕಾರ್ಖಾನೆಗಳಿಗೆ ನೆರವಾಗಲಿದೆ ಎಂದು ಅವರು ಹೇಳಿದರು.