ಬೆಂಗಳೂರು: ತಿರುಪತಿ ಎಕ್ಸ್ಪ್ರೆಸ್ ಹತ್ತಿ ದಿಲ್‍ವಾಲಾ ಆಗಿದ್ದ ನಟ ಸುಮಂತ್ ಶೈಲೇಂದ್ರ ಇದೀಗ ಮತ್ತೆ ಗೋವಿಂದಾ ಗೋವಿಂದಾ ಅಂತಿದ್ಧಾರೆ. ಈ ಸಲ ಕಾಮಿಡಿ ಕಿಕ್ ಕೊಡೋಕೆ ರೆಡಿಯಾಗಿ ಬರ್ತಿದ್ದಾರೆ. ನಟ ಸುಮಂತ್ ಶೈಲೇಂದ್ರ ಈಗ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ.
2017ರಲ್ಲಿ ತೆರೆಕಂಡ`ಲೀ’ ಸಿನಿಮಾ ನಂತ್ರ ಸ್ಯಾಂಡಲ್‍ವುಡ್‍ನಿಂದ ಕಣ್ಮರೆಯಾಗಿದ್ದ ನಟ ಈಗ ಗೋವಿಂದಾ ಗೋವಿಂದಾ ಅಂತಿದ್ದಾರೆ.
`ಗೋವಿಂದ ಗೋವಿಂದ’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಇಲ್ಲಿ ಗೋವಿಂದನ ಜೊತೆಯಾಗಿರೋದು ಕವಿತಾಗೌಡ.ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದ್ರೆ, ಜಾಕಿ ಸುಂದರಿ ಭಾವನಾ ಮೆನನ್ ಕೂಡ ಈ ಚಿತ್ರದ ನಾಯಕಿ ಅನ್ನೋದು. ಈಗಾಗ್ಲೇ ರಿಲೀಸ್ ಆಗಿರೋ ಹಾಡು ಪ್ರೇಕ್ಷಕರ ಮನಸ್ಸು ಕದ್ದಿದೆ.
ತಿಲಕ್ ನಿರ್ದೇಶನದ `ಗೋವಿಂದ ಗೋವಿಂದ’ ಪಕ್ಕಾ ಮನರಂಜನೆ ಜೊತೆಗೆ ಥ್ರಿಲರ್ ಬೇಸ್ ಸಿನಿಮಾ. ನಗು ಮತ್ತು ಕುತೂಹಲ ಚಿತ್ರದ ಹೈಲೈಟ್ಸ್. `ಮಾಡರ್ನ್ ಸುಪ್ರಭಾತ’ ಚಿತ್ರದ ಸಾಂಗ್ ಈಗಾಗಲೇ ವೈರಲ್ ಆಗಿದ್ದು, ಚಿತ್ರದ ಫಸ್ಟ್ ಲುಕ್, ಟೀಸರ್, ಪೋಸ್ಟರ್‍ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಶೈಲೇಂದ್ರ ಬಾಬು ಮತ್ತು ರವಿ ಗರಣಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಗಳಲ್ಲಿ ಏಕ ಕಾಲದಲ್ಲಿ ರಿಲೀಸ್ ಆಗುತ್ತಿದೆ.