ನನ್ನ ಮಗಳನ್ನು ನಮ್ಮ ಬಳಿಗೆ ಕಳುಹಿಸಿಕೊಡಿ. ನಮ್ಮ ಜೊತೆ ನಾಲ್ಕು ದಿನ ಇರಲಿ. ನಾನು ಮಾಜಿ ಯೋಧ. ಆಕೆಗೆ ನಾನೇ ರಕ್ಷಣೆ ಕೊಡುತ್ತೇನೆ ಎಂದು ಸಿಡಿ ಪ್ರಕರಣದ ಯುವತಿ ಪೋಷಕರು ಮನವಿ ಮಾಡಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ದಿಢೀರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮಗಳು ಸ್ವ ಇಚ್ಛೆಯಿಂದ ಹೇಳಿಕೆ ನೀಡುತ್ತಿಲ್ಲ. ಅವಳ ಕಡೆ ಈ ತರ ಹೇಳಿಕೆ ಕೊಡಿಸುತ್ತಿದ್ದಾರೆ. ಈ ಬಗ್ಗೆ ಆಡಿಯೋ ಸಾಕ್ಷ್ಯ ಸಮೇತ ಹೇಳಿದ್ದೀವಿ ಎಂದರು.
ಮಗಳನ್ನು ನಮ್ಮ ಬಳಿಗೆ ಕಳುಹಿಸಿಕೊಡಿ. ಎರಡು ದಿನ ನಮ್ಮ ಜೊತೆ ಇರೋಕೆ ಬಿಡಿ. ಅವಳನ್ನ ಫ್ರೀ ಯಾಗಿ ಇರೋಕೆ ಬಿಡಿ. ಅವಳ ಮೇಲೆ ಒತ್ತಡ ಇದೆ. ನಮ್ಮ ಮೇಲೆ ಯಾವ ರೀತಿಯ ಒತ್ತಡ ಇಲ್ಲ. ನನ್ನ ಮಗಳು ನಮ್ಮ ಹತ್ತಿರ ಬಂದ ಮೇಲೆ ಮುಂದೇನು ಮಾಡಬೇಕು ಎಂದು ನಿರ್ಧಾರ ಮಾಡುತ್ತೇವೆ. ಅವಳ ಈಗಿನ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಹೇಳಿದರು.
ಎರಡು ತಿಂಗಳ ಹಿಂದೆ ನನಗೆ ಆಕಾಶ್ ಪರಿಚಯ ಆಗಿದ್ದ. ಪುಣ್ಯಾತ್ಮ ಡಿಕೆಶಿ ನಮ್ಮ ಅಕ್ಕನನ್ನ ಹೀಗೆ ನಡೆಸಿಕೊಳ್ತಿದ್ದಾನೆ. ಡಿಕೆಶಿಯನ್ನ ಬಂಧಿಸಿ ವಿಚಾರಣೆ ಮಾಡಿದರೆ ಎಲ್ಲಾ ಗೊತ್ತಾಗುತ್ತೆ ಎಂದು ಯುವತಿ ತಮ್ಮನ ಹೇಳಿದ್ದಾರೆ.
25 ದಿನದಿಂದ ನಮ್ಮ ಮಗಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳ ಮೇಲೆ ಒತ್ತಡ ಹೆರಲಾಗುತ್ತಿದೆ. ನನ್ನ ಮಗಳ ಮೇಲೆ ಗನ್ ಇಟ್ಟು ಹೆದರಿಸ್ತಾರೆ. ಅದಕ್ಕೆ ಈ ತರಹದ ಹೇಳಿಕೆ ನೀಡ್ತಿದ್ದಾಳೆ. ತಂದೆ ತಾಯಿ ಹತ್ತಿರ ಇರೋಕೆ ರೆಡಿ ಇದ್ದರೆ ಕರ್ಕೋಳೋಕೆ ನಾವ್ ರೆಡಿ.
ಡಿಕೆಶಿ ಕಡೆಯವರು ಕೆಲಸ ಕೊಡಿಸ್ತೀವಿ ಅಂಥ ಹೇಳಿದ್ದಳು. ಇನ್ನೂ ಸ್ವಲ್ಪ್ ದಿನಕ್ಕೆ ಮದುವೆ ಮಾಡ್ತೀವಿ. ಕೆಲಸ ಬೇಡ ಅಂತ ಹೇಳಿದ್ದೆವು. ವಿಡಿಯೋ ನಂದಲ್ಲ. ಅದನ್ನೆಲ್ಲಾ ಎಡಿಟ್ ಮಾಡಲಾಗಿದೆ ಎಂದು ಹೇಳಿದ್ಲು. ಎರಡಮೂರು ದಿನದಲ್ಲಿ ಭೇಟಿ ಆಗ್ತೀನಿ ಅಂತ ಹೇಳಿದ್ದಳು. ನನ್ನ ಸಿಮ್ ಮತ್ತು ಮೊಬೈಲ್ ಕಸ್ಕೊಂಡಿದ್ದಾರೆ ಅಂಥ ಹೇಳಿದ್ದಳು ಎಂದು ಪೋಷಕರು ಹೇಳಿದರು.