ಡಿಸ್ಕೋ ಹಾಡುಗಳಿಗೆ ಸಂಗೀತ ನೀಡುವುದರಲ್ಲಿ ಎತ್ತಿದ ಕೈ ಆಗಿದ್ದ ಬಾಲಿವುಡ್ ಸಂಗೀತ ನಿರ್ದೇಶಕ ಬಪ್ಪಿ ಲಹಿರಿ ವಿಧಿವಶರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.
ಡಿಸ್ಕೊ ಡ್ಯಾನ್ಸರ್ ಸೇರಿದಂತೆ ಹಲವು ಜನಪ್ರಿಯ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದ ಬಪ್ಪಿ ಲಹರಿ, ಕನ್ನಡದಲ್ಲೂ ಒಂದು ಸಿನಿಮಾಗೆ ಸಂಗೀತ ನಿರ್ದೇಶನ ನೀಡಿದ್ದರು.
ವಿಷ್ಣುವರ್ಧನ್ ಮತ್ತು ಭವ್ಯಾ ನಟಿಸಿದ್ದ ಕೃಷ್ಣ ನೀ ಬೇಗನೆ ಬಾರೋ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನೀಡಿದ್ದು, ಈ ಚಿತ್ರದ ಹಾಡುಗಳು ಸೂಪರ್ ಹಿಟ್ ಆಗಿದ್ದವು.
ಕಳೆದ ವರ್ಷ ಬಪ್ಪಿ ಲಹರಿಗೆ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿತ್ತು. ಇದಾದ ನಂತರ ಹಾಸಿಗೆ ಹಿಡಿದಿದ್ದ ಅವರು, ಮಂಗಳವಾರ ರಾತ್ರಿ 11.30ರ ಸುಮಾರಿಗೆ ವಿಧಿವಶರಾದರು ಎಂದು ವೈದ್ಯರು ತಿಳಿಸಿದ್ದಾರೆ.