ಬೆಂಗಳೂರು : ಕೊರೊನಾ ಪಾಸಿಟಿವ್ ಬಂದಕ್ಷಣ ಭಯಪಡುವ ಅಗತ್ಯವಿಲ್ಲ. ಇದೊಂದು ಸಾಮಾನ್ಯ ಜ್ವರ, ನೆಗಡಿಯಂತಹ ವೈರಸ್, ಪಾಸಿಟಿವ್ ಎಂದಾಕ್ಷಣ ಭಯಗೊಂಡು ಆಸ್ಪತ್ರೆಗಳಿಗೆ ದಾಖಲಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯವಾಗಿ ಆಸ್ಪತ್ರೆಗೆ ಬರುವುದರಿಂದ ಅಗತ್ಯವಿರುವ ಸೋಂಕಿತರಿಗೂ ಬೆಡ್, ಆಕ್ಸಿಜನ್ ಸಿಗದೆ ಸಾಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಸೋಂಕಿನ ಲಕ್ಷಣ ಕಂಡು ಬಂದಾಕ್ಷಣ ಆಸ್ಪತ್ರೆಗೆ ಬರಬೇಡಿ. ಮನೆಯಲ್ಲಿಯೇ ಐಸೋಲೇಟ್ ಆಗಿ, ಟೆಲಿಕಾಲಿಂಗ್ ಮೂಲಕ ವೈದ್ಯರನ್ನು ಸಂಪರ್ಕಿಸಿ ಅವರಿಂದ ಔಷಧ ಹಾಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ ಎಂದು ಹೇಳಿದರು.
ಭಾರತದಲ್ಲಿ ಈಗ ಕೊರೊನಾ 2ನೇ ಅಲೆ ಮಾತ್ರ ಇದೆ. ಇದು ಇನ್ನೂ 30-40 ದಿನಗಳ ವರೆಗೆ ಇರುತ್ತದೆ. ಆದರೆ ಬೇರೆ ದೇಶಗಳಲ್ಲಿ 3 ಮತ್ತು 4ನೇ ಅಲೆ ಕೂಡ ಆರಂಭವಾಗಿದೆ ಎಂಬ ಆತಂಕಕಾರಿ ಮಾಹಿತಿ ಎಂದರು.