ಆಧಾರ್ ಕಾರ್ಡ್ ಗಳ ಫೋಟೊಕಾಪಿಗಳನ್ನು ಯಾವುದೇ ಸಂಸ್ಥೆ ಜತೆ ಹಂಚಿಕೊಳ್ಳಬೇಡಿ ಎಂದು ಕೇಂದ್ರ ಸರ್ಕಾರ ನಾಗರಿಕರಿಗೆ ಸೂಚನೆ ನೀಡಿದೆ. ಆಧಾರ್ ಕಾರ್ಡ್ ಗಳ ದುರ್ಬಳಕೆಯನ್ನು ತಡೆಯಲು ಅದು ಮಹತ್ವದ ಸಲಹೆ ಹೊರಡಿಸಿದೆ.
ಆಧಾರ್ ಕಾರ್ಡ್ ಗಳ ದುರ್ಬಳಕೆಗೆ ಅವಕಾಶ ನೀಡದಂತೆ ಆಧಾರ್ ಕಾರ್ಡ್ಗಳ ಮುಚ್ಚಿದ ಪ್ರತಿಗಳನ್ನು ಮಾತ್ರ ಹಂಚಿಕೊಳ್ಳುವಂತೆ ಸರ್ಕಾರ ಭಾನುವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. “ಯಾವುದೇ ಸಂಸ್ಥೆಯ ಜತೆಗೆ ನಿಮ್ಮ ಆಧಾರ್ ಫೋಟೊ ಕಾಪಿಯನ್ನು ಹಂಚಿಕೊಳ್ಳಬೇಡಿ. ಏಕೆಂದರೆ ಅದು ದುರ್ಬಳಕೆ ಆಗಬಹುದು. ಅದರ ಬದಲು, ದಯವಿಟ್ಟು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆ ಮಾತ್ರ ಕಾಣಿಸುವಂತಹ ಮುಸುಕುಧಾರಿ ಆಧಾರ್ ಕಾರ್ಡ್ ಅನ್ನು ಬಳಸಿ” ಎಂದು ಹೇಳಿದೆ. ಇದನ್ನೂ ಓದಿ : – ಯುನಿಕಾರ್ನ್ ಮೂಲಕ 25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹ – ಮೋದಿ
ಪರವಾನಗಿ ಇಲ್ಲದ, ಹೋಟೆಲ್ ಗಳು ಮತ್ತು ಸಿನಿಮಾ ಮಂದಿರಗಳಂತಹ ಖಾಸಗಿ ಸಂಸ್ಥೆಗಳು ಆಧಾರ್ ಕಾರ್ಡ್ ಸಂಗ್ರಹಿಸಲು ಅಥವಾ ಅದರ ಪ್ರತಿಗಳನ್ನು ಇರಿಸಿಕೊಳ್ಳಲು ಅನುಮತಿ ಇಲ್ಲ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ ಸೂಚನೆ ತಿಳಿಸಿದೆ. ಯಾವುದೇ ಸಂಸ್ಥೆಯ ಜತೆ ಆಧಾರ್ ಕಾರ್ಡ್ ಗಳನ್ನು ಹಂಚಿಕೊಳ್ಳುವ ಮುನ್ನ, ಅದು ಯುಐಡಿಎಐನಿಂದ ಅಧಿಕೃತ ಬಳಕೆದಾರ ಪರವಾನಗಿ ಹೊಂದಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ನಾಗರಿಕರಿಗೆ ಸಲಹೆ ಕೊಟ್ಟಿದೆ.
ಇದನ್ನೂ ಓದಿ : – ₹2000 ನೋಟುಗಳ ಸಂಖ್ಯೆ ಭಾರೀ ಇಳಿಕೆ! ಕುತೂಹಲ ಕೆರಳಿಸಿದ ಮೋದಿ ನಡೆ..!