ಹಲಸಿನ ಕಾಯಿ ಕಬಾಬ್‌ ಮಾಡುವುದು ಎಷ್ಟು ಸುಲಭ ಗೊತ್ತಾ..?

ಚಿಕ್ಕನ್‌ ಕಬಾಬ್‌ ಮಾಡಿ ಮಾಡಿ ಬೇಜಾರಿಗಿದ್ದರೆ ಒಮ್ಮೆ ಹಲಸಿನ ಕಾಯಿಯ ಕಬಾಬ್‌ ಅನ್ನು ಟ್ರೈ ಮಾಡಿ. ಹಲಸಿನ ಕಾಯಿ ಕಬಾಬ್ ಮಾಡುವುದು ಎಷ್ಟು ಸುಲಭವೋ ಅಷ್ಟೇ ರುಚಿಯಾಗಿರುತ್ತದೆ. ಗರಿಗರಿಯಾದ ಹಲಸಿನ ಕಾಯಿ ಕಬಾಬ್ ಸಂಜೆ ಸಮಯ ಟೀ ಅಥವಾ ಊಟದ ಜೊತೆಗೆ ಸೇವಿಸಬಹುದು. ಹಾಗಾದ್ರೆ ಇನ್ನೇಕೆ ತಡ ಗರಿ ಗರಿಯಾದ ಹಲಸಿನ ಕಾಯಿ ಕಬಾಬ್ ಮಾಡುವ ಬನ್ನಿ.


ಬೇಕಾಗುವ ಸಾಮಗ್ರಿಗಳು:-
ಹಲಸಿನ ಕಾಯಿ- 1
ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್- 4 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕಬಾಬ್ ಪೌಡರ್- ಅರ್ಧ ಕಪ್
ಕಾಳು ಮೆಣಸಿನ ಪೌಡರ್- 1 ಚಮಚ
ಕಾನ್ಪ್ಲೋರ್- 4 ಚಮಚ
ಶುಂಠಿ, ಬೆಳ್ಳುಳ್ಳಿ ಪೇಸ್ಟ್- 1 ಚಮಚ
ಖಾರದ ಪುಡಿ- 1 ಚಮಚ ಇದನ್ನೂ ಓದಿ :- ಸಿಂಪಲ್ ಆಗಿ ಮಸಾಲಾ ಎಗ್ ಭುರ್ಜಿ ಮಾಡೋದು ಹೇಗೆ ಗೊತ್ತಾ..?


ಮಾಡುವ ವಿಧಾನ:-
ಮೊದಲು ಒಂದು ಪಾತ್ರೆಯಲ್ಲಿ ನೀರು, ಉಪ್ಪು ಹಾಗೂ ಈಗಾಲೇ ಕಟ್ ಮಾಡಿಟ್ಟಿರುವ ಎಳೆ ಹಲಸಿನ ಕಾಯಿಯನ್ನು ಹಾಕಿ ಬೇಯಿಸಲು ಇಡಬೇಕು. ನಂತರ ಒಂದು ಬೌಲ್ ಗೆ ಕಬಾಬ್ ಪೌಡರ್, ಖಾರದ ಪುಡಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಕಾನ್ಪ್ಲೋರ್, ಕಾಳು ಮೆಣಸಿನ ಪೌಡರ್, ಬ್ಯಾಡಗಿ ಮೆಣಸಿನಕಾಯಿ ಪೇಸ್ಟ್, ಉಪ್ಪು ಹಾಕಿ ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ನಂತರ ಈ ಮಿಶ್ರಣದಲ್ಲಿ ಈಗಾಗಲೇ ಬೇಯಿಸಿದ ಹಲಸಿನ ಕಾಯಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಹಾಗೆ ಇಟ್ಟಿರಬೇಕು. ನಂತರ ಬಾಣಲಿಗೆ ಎಣ್ಣೆಯನ್ನು ಹಾಕಿ ಬಿಸಿಯಾದ ನಂತರ ಮಸಾಲೆಯಲ್ಲಿ ಮಿಶ್ರ ಮಾಡಿದ ಹಲಸಿನ ಕಾಯಿ ಹಾಕಿ ಬೇಯಿಸಿದರೆ ರುಚಿಯಾದ ಹಲಸಿನ ಕಾಯಿ ಕಬಾಬ್ ಸವಿಯಲು ಸಿದ್ಧವಾಗುತ್ತದೆ.

ಇದನ್ನೂ ಓದಿ :-  ಸಿಂಪಲ್ ಆಗಿ ಮಾಡಿ ಚಿಕನ್ ಕರಿ – ಮನೆ ಮಂದಿಯೆಲ್ಲ ಟೇಸ್ಟ್ ಸವಿಯಿರಿ

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!