ದಾಸವಾಳದ ಹೂವು ಬರಿ ಪೂಜೆಗೆ ಅಷ್ಟೇ ಸೀಮಿತವಲ್ಲ. ಅದರಿಂದ ಅನೇಕ ಆರೋಗ್ಯ ಉಪಯೋಗಗಳಿವೆ. ಇದು ಹೊಟ್ಟೆ ನೋವು ಮತ್ತು ಬಾಯಿ ಹುಣ್ಣುಗಳಂತಹ ಕಾಯಿಲೆಗಳನ್ನು ಗುಣಪಡಿಸುತ್ತದೆ.
ದಾಸವಾಳ ಗಿಡದ ಎಲೆಗಳ ಕಷಾಯ ಮಾಡಿ ಕುಡಿಯುವ ಮೂಲಕ ಕಫವನ್ನು ಗುಣಪಡಿಸಲಾಗುತ್ತದೆ . ಮಧುಮೇಹ ಹೊಂದಿರುವವರು ನಿಯಮಿತವಾಗಿ ದಾಸವಾಳ ಹೂವಿನ ಚಹಾ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನೂ ಓದಿ : – ಬೆಟ್ಟದ ನೆಲ್ಲಿಕಾಯಿಯನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲ ಪ್ರಯೋಜನೆ ಇದೆ ನಿಮಗೆ ತಿಳಿದಿದೆಯೇ..?
ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಬದಲಾಗಿ ತ್ವಚೆಯಲ್ಲಿನ ವಯಸ್ಸಾದ ಚಿಹ್ನೆಗಳನ್ನು ಕೂಡ ತಡೆಯಲು ಸಹಾಯ ಮಾಡುತ್ತದೆ. ದಾಸವಾಳದ ಚಹಾವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ತೂಕ ನಷ್ಟಕ್ಕೂ ಕಾರಣವಾಗುತ್ತದೆ.
ಋತುಚಕ್ರದ ಸಮಯದಲ್ಲಿ ದಾಸವಾಳ ಹೂವು ಹೆಚ್ಚು ಪ್ರಯೋಜನಕಾರಿಯಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಮತ್ತು ಸೆಳೆತದಿಂದ ಹೊರಬರಲು ದಾಸವಾಳ ಹೂ ಬೆಸ್ಟ್ ಎಂದೇ ಹೇಳಬಹುದು. ದಾಸವಾಳ ಗಿಡದ ಎಲೆಗಳನ್ನು ಪುಡಿಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದಿಲ್ಲ. ದಾಸವಾಳದ ಹೂವು ಕೂದಲನ್ನು ಬುಡದಿಂದ ದೃಢವಾಗಿಸಲು ಸಹಾಯ ಮಾಡುತ್ತದೆ.ಇದನ್ನೂ ಓದಿ : – ದಿನ ನಿತ್ಯ ಒಂದು ಚಮಚ ಜೇನುತುಪ್ಪ ಸೇವಿಸುವುದರಿಂದ ನಿಮ್ಮ ಆರೋಗ್ಯದಲ್ಲಿ ಆಗುವ ಪ್ರಯೋಜನಗಳೆನು..?