ತುಮಕೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರದ ಪತ್ರಿಕೆ ಸೋರಿಕೆ ಮಾಡಿ ಸುದ್ದಿಯಾಗಿದ್ದ ಕಿಂಗ್ ಪಿನ್ ಆರೋಪಿ ಶಿವಕುಮಾರ್ (65) ಕೊರೊನಾಗೆ ಬಲಿಯಾಗಿದ್ದಾನೆ.
ಜಾಮೀನು ಪಡೆದು ವಿಚಾರಣೆ ಎದುರಿಸುತ್ತಿದ್ದ ಈತ ಕೊರೊನಾ ಸೋಂಕಿಗೆ ತುತ್ತಾಗಿದ್ದ. ಈ ವೇಳೆ ಉಸಿರಾಟ ಸಮಸ್ಯೆಗೆ ಒಳಗಾಗಿ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ಚಿಕಿತ್ಸೆ ಫಲಿಸದೇ ಈತ ಸಾವನ್ನಪ್ಪಿದ್ದಾನೆ.
ಗುಬ್ಬಿ ತಾಲೂಕಿನ ಬಿದರೆಕಾಗ್ಗೆರೆ ಮೂಲದ ಶಿವಕುಮಾರ್, ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಮಾತ್ರವಲ್ಲದೇ ಇತರೆ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್ಸಿ, ಪೊಲೀಸ್ ಸೇರಿದಂತೆ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಈತ ಸೋರಿಕೆ ಮಾಡಿದ್ದ.