CinemaHome

ಬಾಲಿವುಡ್‍ನಲ್ಲಿ ಸೆನ್ಸೇಷನಲ್ ಸೃಷ್ಟಿಸಿದೆ ಡಂಕಿ ಡ್ರಾಪ್-1

ಬಾಲಿವುಡ್‍ನಲ್ಲಿ ಕಿಂಗ್ ಖಾನ್‍ಗೆ ಹುಟ್ಟುಹಬ್ಬದ ಸಂಭ್ರಮ.. ಇದೇ ಸಡಗರದಲ್ಲಿ ಶಾರುಖ್ ನಟನೆಯ ಡಂಕಿ ಸಿನಿಮಾದ ಟೀಸರ್ ರಿಲೀಸ್ ಆಗಿ, ಟ್ರೆಂಡಿಂಗ್‍ನಲ್ಲಿ ಕಮಾಲ್ ಮಾಡುವುದರ ಜೊತೆಗೆ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿದೆ..


ಬಿಟೌನ್ ಕಿಂಗ್ ಖಾನ್ ಶಾರುಖ್ ಮೊನ್ನೆ ಮೊನ್ನೆ ಅಷ್ಟೇ ಅದ್ದೂರಿಯಾಗಿ ಬರ್ತ್‍ಡೆ ಸೆಲೆಬ್ರೇಟ್ ಮಾಡಿಕೊಂಡ್ರು… 58ನೇ ವಸಂತಕ್ಕೆ ಕಾಲಿಟ್ಟಿರುವ ಬಾಲಿವುಡ್ ಬಾದ್ ಷಾನ ಬರ್ತ್‍ಡೆ ಈ ಭಾರಿ ಗ್ರ್ಯಾಂಡ್ ಆಗಿತ್ತು.. ದೇಶದ ನಾನಾ ಭಾಗಗಳಿಂದ ಸಾಗರೋಪಾದಿಯಲ್ಲಿ ಹರಿದುಬಂದದ್ದ ಅಭಿಮಾನಿ ದೇವರುಗಳನ್ನು ಕಂಡು ಬೆರಗಾಗಿದ್ದ ಕಿಂಗ್ ಖಾನ್, ಅಖಂಡ ಅಭಿಮಾನಿ ಬಳಗಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಬಾಲಿವುಡ್ ಬಾದ್ ಷಾಗೆ ಈ ವರ್ಷದ ಬತ್ರ್ಡೇ ಸಿಕ್ಕಾಪಟ್ಟೆ ಸ್ಪೆಷಲ್. ಯಾಕಂದ್ರೆ, ಮರೀಚಿಕೆಯಾಗಿದ್ದ ಗೆಲುವು ಮರಳಿ ಸಿಕ್ಕಿದೆ. ಸೋಲಿನ ಹೊಡೆತಕ್ಕೆ ಸಿಕ್ಕಿ ನಲುಗುತ್ತಿದ್ದ ಕಿಂಗ್ ಖಾನ್‍ಗೆ ಸಕ್ಸಸ್ ಕೈ ಹಿಡಿದಿದೆ. ಪಠಾಣ್, ಜವಾನ್ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್ ಆಗಿ ಕಿಂಗ್ ಖಾನ್ ಹಳೆಯ ಫಾರ್ಮ್‍ಗೆ ಮರಳುವಂತೆ ಮಾಡಿವೆ. ಸೋತ ಜಾಗದಲ್ಲೇ ಗೆದ್ದು ಗಹಗಹಿಸೋದಕ್ಕೆ ಈ ಎರಡು ಸಿನಿಮಾಗಳು ಸಾಥ್ ಕೊಟ್ಟಿವೆ. ಕಿಂಗ್ ಈಸ್ ಆಲ್ವೇಸ್ ಕಿಂಗ್ ಅನ್ನೋದನ್ನ ಪ್ರೂ ಮಾಡೋದಕ್ಕೆ ಪಠಾಣ್, ಜವಾನ್ ಚಿತ್ರಗಳು ಸಹಕರಿಸಿವೆ. ಮನ್ನತ್ ಮನೆಯಿಂದ ಮರೆಯಾಗಿದ್ದ ಅದೃಷ್ಟ ಅನ್ನೋ ಅಶ್ವಮೇಧ ಕುದುರೆಯನ್ನ ವಾಪಾಸ್ ಮನ್ನತ್ ಮನೆಮುಂದೆ ತಂದು ಕಟ್ಟಾಕಿವೆ. ಹೀಗಾಗಿ, ಕಿಂಗ್ ಖಾನ್ ಖುಷಿಯಲ್ಲಿದ್ದಾರೆ. ಅದೇ ಖುಷಿಯಲ್ಲಿ 58ನೇ ವರ್ಷದ ಹುಟ್ಟುಹಬ್ಬವನ್ನ ವಿಜೃಂಭಣೆಯಿಂದ ಆಚರಿಸಿಕೊಂಡಿದ್ದಾರೆ..

ವಿಶೇಷ ಅಂದರೆ ಜನುಮದಿನದ ಸಂಭ್ರಮದಲ್ಲಿರುವ ಬಾದ್ಷಾಗೆ ಡಂಕಿ ಸಾರಥಿ ರಾಜ್ಕುಮಾರ್ ಹಿರಾನಿ ಡಂಕಿ ಡ್ರಾಪ್-1′ ವಿಡಿಯೋ ರಿಲೀಸ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದಾರೆ. ಯೆಸ್ ಡಂಕಿ ಬಾಜೀಘರ್ ಹೀರೋ ಹಾಗೂ ರಾಜ್‍ಕುಮಾರ್ ಹಿರಾನಿ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೋಸ್ಟ್ ಎಕ್ಸ್ಪೆಕ್ಟೆಡ್ ಮೂವೀ. ಫಾರ್ ದಿ ಫಸ್ಟ್ ಟೈಮ್ ಈ ಕ್ರೇಜಿ ಜೋಡಿ ಕೈಜೋಡಿಸಿದ್ದು ಕುತೂಹಲ ಕೆರಳಿಸಿದೆ. ಟೈಟಲ್ ಟೀಸರ್‍ನಿಂದ ಸಮಸ್ತ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದ್ದ ಡಂಕಿ, ಈಗ ಡ್ರಾಪ್-1 ವಿಡಿಯೋದಿಂದ ಸುದ್ದಿಯಾಗ್ತಿದೆ.

ಇದೇನಿದು ಡಂಕಿ ಡ್ರಾಪ್-1 ಅಂತ ಮೂವೀ ಲವ್ವರ್ಸ್ ಮಾತ್ರವಲ್ಲ, ಮೂವೀ ಮೇಕರ್ಸ್‍ಗಳು ಕೂಡ ತಲೆ ಕೆಡಿಸಿಕೊಂಡಿದ್ದಾರೆ. ಪ್ರೀತಿ ಮತ್ತು ಸ್ನೇಹದ ಹೂರಣವನ್ನ ಒತ್ತು ಬರುತ್ತಿರುವ ಡಂಕಿ ಚಿತ್ರದಲ್ಲಿ ಕಾಮಿಡಿ, ಎಮೋಷನ್, ಡ್ರಾಮ, ರೊಮ್ಯಾನ್ಸ್ ಎಲ್ಲವೂ ಇದೆ. ಸಿನಿಮಾ ಪ್ರೇಮಿಗಳಿಗೆ ಮನರಂಜನೆ ನೀಡೋದ್ರ ಜೊತೆಗೆ ಸೊಸೈಟಿಗೆ ಒಂದು ಮೆಸೇಜ್ ಕೂಡ ಇದೆ. ಅದೇನು ಅನ್ನೋದು ಇದೇ ಕ್ರಿಸ್ಮಸ್ ಹಬ್ಬದಂದು ತಿಳಿಯಲಿದೆ.
ದಿಯಾ ಮಿರ್ಜಾ, ತಾಪ್ಸಿ ಪನ್ನು, ಬೊಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್ ಸೇರಿದಂತೆ ಅತೀ ದೊಡ್ಡ ತಾರಾಬಳಗವೆ ಇದೆ.

ಅಂದಹಾಗೆ, ಸಲಾರ್ ವರ್ಸಸ್ ಡಂಕಿ ಫೈಟ್ ಬಗ್ಗೆ ಬಹುಷಃ ನಿಮಗೆಲ್ಲ ತಿಳಿದೇಯಿದೆ. ಡಾರ್ಲಿಂಗ್ ಪ್ರಭಾಸ್ ನಟನೆಯ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಲಾರ್ ಹಾಗೂ ಕಿಂಗ್ ಖಾನ್ ಶಾರುಖ್ ಡಂಕಿ ಒಂದೇ ದಿನ ಕಣಕ್ಕಿಳಿಯುತ್ತವೆ ಅನ್ನೋದು ಹಳೆಯ ಸುದ್ದಿ. ಆದರೆ, ಇತ್ತೀಚೆಗೆ ಡಂಕಿ ಫಿಕ್ಸಾದ ಡೇಟ್‍ಗೆ ರಿಲೀಸ್ ಆಗ್ತಿಲ್ಲವಂತೆ. ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆಯಂತೆ ಅನ್ನೋ ಸುದ್ದಿ ಹಬ್ಬಿತ್ತು. ಕೆಜಿಎಫ್ ಎದುರು ಜೀರೋ ಸಿನಿಮಾ ರಿಲೀಸ್ ಮಾಡಿ ಮಕಾಡೆ ಮಲಗಿದ ಬಾದ್ಷಾ ಸಲಾರ್ ಸಿನಿಮಾಗೆ ಹೆದರಿರಬಹುದು, ಅದಕ್ಕಾಗಿ ಮುಂದಿಟ್ಟ ಹೆಜ್ಜೆನಾ ಹಿಂತೆಗೆದುಕೊಂಡಿರಬಹುದು ಅಂತ ಸುದ್ದಿಯಾಗಿತ್ತು. ಅದಕ್ಕೆಲ್ಲಾ ಇವತ್ತು ಬಿಗ್ ಬ್ರೇಕ್ ಬಿದ್ದಿದೆ.

ಹೌದು, ಯಾವ ಸಲಾರ್‍ಗೂ ಹೆದರೋ ಮಾತೇಯಿಲ್ಲ ಅನ್ನೋದು ಡಂಕಿ ಡ್ರಾಪ್-1 ವಿಡಿಯೋ ಮೂಲಕ ಖಚಿತವಾಗಿದೆ. ಇದೇ ಡಿಸೆಂಬರ್ 22ರಂದು ಮೋಸ್ಟ್ ಅವೈಟೆಡ್ ಡಂಕಿ ತೆರೆಗಪ್ಪಳಿಸಲಿದೆ. ಅದೇ ದಿನ ಕೆಜಿಎಫ್ ಕ್ಯಾಪ್ಟನ್ ಬತ್ತಳಿಕೆಯಿಂದ ತಯಾರಾಗಿರೋ ಸಲಾರ್ ಎನ್ನುವ ಶಿಲೆ ವಲ್ಡ್ರ್ವೈಡ್ ಅನಾವರಣಗೊಳ್ಳಲಿದೆ. ಒಟ್ನಲ್ಲಿ ಡಿಸೆಂಬರ್ 22 ರಂದು ಥಿಯೇಟರ್‍ಗಳಲ್ಲಿ ಹೈವೋಲ್ಟೇಜ್ ಕದನ ನಡೆಯೋದಂತು ಗ್ಯಾಂರೆಂಟಿ..

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!