ದಾವಣಗೆರೆ : ಜಿಲ್ಲಾಸ್ಪತ್ರೆಯಲ್ಲಿದ್ದ ರೆಮಡಿಸಿವರ್ ಕೋವ್ಯಾಕ್ಸಿನ್ ಹೊರಗಡೆ ಮಾರಾಟಕ್ಕೆ ಉತ್ನಿಸಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗಣೇಶಪ್ಪ ಹಾಗೂ ಮಂಜುನಾಥ್ ಬಂಧಿತರಾಗಿದ್ದು, ಇಬ್ಬರು ಜಿಲ್ಲಾಸ್ಪತ್ರೆಯ ಆರೋಗ್ಯ ಸಿಬ್ಬಂದಿಗಳಾಗಿದ್ದಾರೆ.
ಬಂಧಿತರಿಂದ 9 ಕೋವ್ಯಾಕ್ಸಿನ್ ವಶಕ್ಕೆ ಪಡೆಯಲಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ನೀಡುವಾಗ ಇಬ್ಬರು ಕೋವ್ಯಾಕ್ಸಿನ್ ದುರುಪಯೋಗಕ್ಕೆ ಮುಂದಾಗಿದ್ದಾರೆ. ಒಂದು ಕೋವ್ಯಾಕ್ಸಿನ್ ಒಂದು ಸಾವಿರಕ್ಕೆ ಮಾರಲು ಯತ್ನಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಔಷಧ ಪರಿವೀಕ್ಷಕರಾದ ಗೀತಾ ಎಂ.ಎಸ್ ಅವರು ದಾಳಿ ನಡೆಸಿದ್ದಾರೆ. ಇನ್ನು ಈ ಸಂಬಂಧ ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ