ಜಪಾನ್ : ಜಪಾನ್ ನ ಮಿಯಾಗಿ ಪ್ರಿಫೆಕ್ಚರ್ ನಲ್ಲಿ ಇಂದು ಬೆಳ್ಳಂಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 9:29 ಕ್ಕೆ ಭೂಕಂಪನ ಸಂಭವಿಸಿದೆ, ಅದರ ಕೇಂದ್ರಬಿಂದು 38.3 ಡಿಗ್ರಿ ಉತ್ತರ ಮತ್ತು ಪೂರ್ವಕ್ಕೆ 141.9 ಡಿಗ್ರಿ ರೇಖಾಂಶ ಮತ್ತು 50 ಕಿ.ಮೀ ಆಳದಲ್ಲಿತ್ತು ಎಂದು ಜಪಾನ್ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯವರೆಗೆ, ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ.
ಭೂಕಂಪನದಿಂದ ಜಪಾನ್ ಕರಾವಳಿ ಜನತೆ ತೀವ್ರ ಆತಂಕಕ್ಕೆ ಕಾರಣವಾಗಿದ್ದರು. ಆದರೆ ಸಮುದ್ರದ ತೀರಾ ಆಳದಲ್ಲಿ ಭೂಕಂಪನ ಸಂಭವಿಸಿದ್ದರಿಂದ ಸುನಾಮಿ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದ ಪರಿಣಾಮ ಯಾವುದೇ ಸಾವು ನೋವಿನ ವರದಿಗಳಾಗಿಲ್ಲ ಎನ್ನಲಾಗಿದೆ.