ಆನೇಕಲ್: ಸಾಲದ ಸುಳಿಯಿಂದ ಹೊರಬರಲಾಗದೇ ಮಗಳನ್ನು ಕೊಂದು ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ನಲ್ಲಿ ನಡೆದಿದೆ.
ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆ ನಿವಾಸಿಯಾದ ವಿಜಯಕುಮಾರ್ (39) ಮತ್ತು ಪುತ್ರಿ ಸಮೀಕ್ಷಾ (7) ಮೃತಪಟ್ಟಿದ್ದಾರೆ.
ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಗ್ರಾಮದ ರೇವಣ್ಣ ಎಂಬುವರ ಮನೆಯಲ್ಲಿ ಬಾಡಿಗೆಗೆ ಕುಟುಂಬ ವಾಸವಿದ್ದು, ಪತ್ನಿ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಫ್ಯಾಬ್ರಿಕೇಶನ್ ಕೆಲಸ ಮಾಡಿಕೊಂಡಿದ್ದ ವಿಜಯ್ ಕುಮಾರ್, ಸಮೀಕ್ಷಾಳಿಗೆ ಮೊದಲು ನಿದ್ದೆ ಮಾತ್ರೆ ನೀಡಿ ತಲೆಯನ್ನು ಕವರ್ ಹಾಕಿ ಚಾರ್ಜರ್ ವೈರ್ ನಿಂದ ಬಿಗಿದು ಕೊಲೆ ಮಾಡಿ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳಕ್ಕೆ ಡಿವೈಎಸ್ ಪಿ ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ನೀಡಿ ಪರಿಶೀಲನೆ ನಡೆಸಿದ್ದು, ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.