ಟಿಕೆಟ್ ಪಡೆಯದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಸಂಚಾರ ಮಾಡಿದ ಒಟ್ಟು 2828 ಪ್ರಯಾಣಿಕರಿಂದ ಒಟ್ಟು 454660 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
![BMTC rolls out buses, charges Rs 70 per ride](https://static.toiimg.com/photo/imgsize-1171216,msid-75833840/75833840.jpg)
ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 157 ಪುರುಷ ಪ್ರಯಾಣಿಕರಿಂದ ದಂಡ ವಸೂಲಿ ಮಾಡಲಾಗಿದೆ. ಬಿಎಂಟಿಸಿ ಸಾರಿಗೆ ಸಂಸ್ಥೆ ವಾಹನಗಳಲ್ಲಿ ಟಿಕೆಟ್ ಪಡೆಯದೆ ಹಾಗೂ ಅನಧಿಕೃತವಾಗಿ ಪ್ರಯಾಣ ಮಾಡುವವರ ವಿರುದ್ಧ ತಪಾಸಣಾ ಅಧಿಕಾರಿಗಳು ಬಿಗಿ ಕ್ರಮ ಕೈಗೊಳ್ಳುತ್ತಿದ್ದು ನಿರ್ವಾಹಕರ ವಿರುದ್ಧ 1426 ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಪುರುಷ ಪ್ರಯಾಣಿಕರು ಆಸನಗಳನ್ನು ತೆರವು ಮಾಡಿಕೊಡುವ ಮೂಲಕ ಅವರಿಗೆ ಕುಳಿತುಕೊಳ್ಳಲು ಅವಕಾಶ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲೂ ತಿಳಿಸಿದೆ. ಇದನ್ನೂ ಓದಿ : – ಮುಳುಗುವ ಹಡಗು ಕಾಂಗ್ರೆಸ್ ಗೆ ಡಿಕೆಶಿ ಕ್ಯಾಪ್ಟನ್ – ರೇಣುಕಾರ್ಚಾಯ ವ್ಯಂಗ್ಯ