ಬೆಳಗಾವಿ: ಕೇಂದ್ರದ ಮಾಜಿ ಸಚಿವ ರೈತ ಹೋರಾಟಗಾರ ಬಾಬಾಗೌಡ ಪಾಟೀಲ (78) ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಳಗಾವಿಯ ಕೆಎಲ್ ಇ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ ಬಾಬಾಗೌಡ ಪಾಟೀಲರು ನಿಧನರಾಗಿದ್ದಾರೆ.
ಬಾಬಾಗೌಡ ಪಾಟೀಲ ಅವರು ಈಗಲೂ ರೈತಪರ ಹೋರಾಟದಲ್ಲಿ ಸಕ್ರೀಯವಾಗಿದ್ದರು. ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದವರಾದ ಬಾಬಾಗೌಡ ಪಾಟೀಲ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು.