ರಾಮನಗರ: ಸರಕಾರದ ತಪ್ಪು ಇಟ್ಟುಕೊಂಡು ಚಾಲಕರ, ನಿರ್ವಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಡದಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರದ ಯೋಗ್ಯತೆಗೆ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗಿಲ್ಲ. ಈ ಸರಕಾರ ಎಲ್ಲಿ ಹಣವನ್ನ ಪೋಲು ಮಾಡುತ್ತಿದೆ ಅಂತಾ ರಾಜ್ಯದ ಜನತೆಗೆ ಗೊತ್ತಿಲ್ಲವಾ ಎಂದು ಕಿಡಿಕಾರಿದರು.
ನಾನು 2006-07 ರಲ್ಲಿ ಮುಖ್ಯಮಂತ್ರಿ ಆಗಿದ್ದ ವೇಳೆ ಸಾರಿಗೆ ಇಲಾಖೆಯಲ್ಲಿ ಹಣವನ್ನ ಠೇವಣಿಯಾಗಿ ಇಟ್ಟಿದೆ. ಆದರೆ, ಈ ಸರಕಾರದಲ್ಲಿ ಹಣ ಇಲ್ಲಾ ಅಂದ್ರೆ ಹೇಗೆ. ಸರಕಾರ ಅಭಿವೃದ್ಧಿ ಹೆಸರಿನಲ್ಲಿ ಉಚಿತವಾಗಿ ಕೆಲ ಯೋಜನೆಗಳನ್ನ ಜಾರಿ ಮಾಡಿ. ಆದರೆ ಹೊರೆಯನ್ನ ಸಾರಿಗೆ ಇಲಾಖೆ ಮೇಲೆ ಹೊರಿಸಿದ್ರೆ ಇಲಾಖೆ ನಷ್ಟವಾಗದೆ ಲಾಭವಾಗುತ್ತಾ ಎಂದು ಪ್ರಶ್ನೆ ಮಾಡಿದರು.
ಇನ್ನೂ ನೈಟ್ ಕರ್ಪ್ಯೂ ಮಾಡಿದ್ದರಿಂದ ಕೊರೋನಾ ಕಡಿಮೆ ಆಗುತ್ತಾ ರಾತ್ರಿ ವೇಳೆ ಶೇ. 80 ರಷ್ಟು ಜನ ಮನೆಯಲ್ಲಿ ಇರುತ್ತಾರೆ. ಇಂತಹ ಸಮಯದಲ್ಲಿ ಕರ್ಪ್ಯೂ ಮಾಡಿದ್ರೆ ಏನ್ ಪ್ರಯೋಜನ. ಕೊರೋನಾ ಹೆಚ್ಚಾಗುತ್ತಿರುವ ಸಮಯದಲ್ಲಿ ನಗರಸಭೆ ಚುನಾವಣೆ ಉಪ ಚುನಾವಣೆ ನಡೆಸುತ್ತೀರಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.