ರೆಸ್ಟೋರೆಂಟ್ ನಲ್ಲಿ ಮಾಡಿದ್ದ ಹೂಡಿಕೆಯಲ್ಲಿ ಲಾಭ ಕೊಡದೇ ವಂಚಿಸಲಾಗಿದೆ ಎಂದು ಆರೋಪಿಸಿ ದಕ್ಷಿಣ ಭಾರತದ ಖ್ಯಾತಿ ನಟಿ ಹಾಗೂ ಸಂಜನಾ ಗಲ್ರಾನಿ ಸೋದರಿ ನಿಕ್ಕಿ ಗಲ್ರಾನಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ರೆಸ್ಟೋರೆಂಟ್ ಹೆಸರಲ್ಲಿ ಹಣ ಹೂಡಿಕೆ ಮಾಡಿದ್ದ ಹಣದಲ್ಲಿ ಲಾಭವನ್ನು ಕೊಡುತ್ತಿಲ್ಲ. ಅಲ್ಲದೇ ಹೂಡಿಕೆ ಮಾಡಿದ ಹಣವನ್ನೂ ಹಿಂದಿರುಗಿಸದೇ ವಂಚಿಸಲಾಗಿದೆ ಎಂದು ನಿಕ್ಕಿ ಗಲ್ರಾನಿ ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಿಖಿಲ್ ಹೆಗ್ಡೆ ಎಂಬಾತನ ಒಡೆತನದಲ್ಲಿರುವ ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಮಾಲಿಸ್ ರೆಸ್ಟೊ ಕೆಫೆಯಲ್ಲಿ ನಿಕ್ಕಿ ಗಲ್ರಾನಿ 50 ಲಕ್ಷ ರೂ. ಹಣ ಹೂಡಿಕೆ ಮಾಡಿದ್ದರು.
2016ರ ಡಿಸೆಂಬರ್ ನಲ್ಲಿ 50 ಲಕ್ಷ ರೂ. ಹಣ ಹೂಡಿಕೆ ಮಾಡಲಾಗಿದ್ದು, 50 ಲಕ್ಷ ಹಣ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಲಾಭವಾಗಿ 1 ಲಕ್ಷ ನೀಡೋದಾಗಿ ನಿಖಿಲ್ ಹೆಗ್ಡೆ ಹೇಳಿದ್ದ. ನಿಖಿಲ್ ಹೆಗ್ಡೆ ಮಾತನ್ನ ನಂಬಿ ನಟಿ ಹಣ ಹೂಡಿಕೆ ಮಾಡಿದ್ದರು. ನಿಖಿಲ್ ಹೆಗ್ಡೆ ಜೊತೆ ಹಣ ಹೂಡಿಕೆ ಬಗ್ಗೆ ಒಪ್ಪಂದ ಪತ್ರಕ್ಕೆ ಇಬ್ಬರೂ ಸಹಿ ಹಾಕಿದ್ದರು.
ನಿಖಿಲ್ ಹೆಗ್ಡೆ ಹ ಹೂಡಿಕೆ ಮಾಡಿದ ನಂತರ ಪ್ರತಿ ತಿಂಗಳು ಲಾಭವಾಗಿ 1 ಲಕ್ಷ ಹಣವನ್ನು ಕೊಡುತ್ತಿಲ್ಲ. ಅಲ್ಲದೇ ಹೂಡಿಕೆ ಮಾಡಿದ ಹಣವನ್ನೂ ವಾಪಸ್ ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.