ಬೆಳಗಾವಿಯ ( Belagavi ) ನಿಪ್ಪಾಣಿ ( Nippani ) ಹೊರವಲಯದ ಸ್ಥವನಿಧಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಟ್ರಕ್ ಹಾಗೂ ಕಾರು ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು
ಕಾರನಲ್ಲಿದ್ದ ನಾಲ್ಕು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಅದಗೋಂಡಾ ಬಾಬು ಪಾಟೀಲ್ (babu patil ) (60) ಪತ್ನಿ ಛಾಯಾ ಅದಗೊಂಡ (chaya )ಪಾಟೀಲ್ ( 55) ಚಂಪಾತಾಯಿ ಮಗದುಮ್ (80) ಮಹೇಶ್ ದೇವಗೊಂಡ ಪಾಟೀಲ್ 23 ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು. ಪೂನಾ ಬೆಂಗಳೂರು (bengaluru ) ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದ ಅಪಘಾತ ಇದಾಗಿದ್ದು ಕೊಲ್ಲಾಪುರದಿಂದ ಬೆಳಗಾವಿ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ನಿಪ್ಪಾಣಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ : – ದಾವೋಸ್ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ ಸಿಎಂ ಬೊಮ್ಮಾಯ