ದೇಶದಲ್ಲಿ ಕೊರೊನಾ ಅಬ್ಬರದ ನಡುವೆಯೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರಿಕೆ ಕಾಣುತ್ತಿದ್ದು, ಶುಕ್ರವಾರ ಕೂಡ ಪೆಟ್ರೋಲ್ ದರ ಲೀಟರ್ ಗೆ 29 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 34 ಪೈಸೆ ಏರಿಕೆ ಮಾಡಲಾಗಿದೆ.
ತೈಲ ಕಂಪನಿಗಳು ಬೆಲೆ ಏರಿಸಿದ್ದರಿಂದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 92.84 ರೂ. ಮತ್ತು ಡೀಸೆಲ್ ಬೆಲೆ ಲೀಟರ್ ಗೆ 83 ರೂ.ಗೆ ಏರಿಕೆಯಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್ ಗೆ 98.65 ರೂ. ಹಾಗೂ ಡೀಸೆಲ್ ಲೀಟರ್ ಗೆ 90 ರೂ. ಆಗಿದ್ದು, ಶತಕದ ಸಮೀಪ ತಲುಪಿವೆ.
ದೇಶದ ಹಲವಾರು ರಾಜ್ಯಗಳ ಹಲವಾರು ಜಿಲ್ಲೆಗಳಲ್ಲಿ ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ದರ 100ರ ಗಡಿ ದಾಟಿದ್ದು, ಇದೇ ರೀತಿ ಏರಿಕೆಯಾಗುತ್ತಿದ್ದರೆ ನಗರ ಪ್ರದೇಶಗಳಲ್ಲಿ ಕೂಡ ಶೀಘ್ರದಲ್ಲೇ 100ರ ಗಡಿ ದಾಟಲಿದೆ.