ಕೊರೊನಾ ಇಡೀ ದೇಶದಲ್ಲಿ ಜನರ ನೆದ್ದಿಗೆಡಿಸಿದೆ. ಒಂದೆಡೆ ಸರ್ಕಾರ ಇದರ ನಿಯಂತ್ರಣದ ಬಗ್ಗೆ ತಲೆ ಕೆಡೆಸಿಕೊಂಡಿದೆ. ಇದರ ಮದ್ಯೆದಲ್ಲೂ ಕೊವೀಡ್ ನಿಯಮ ಗಾಳಿಗೆ ತೂರಿ ಓಕುಳಿ ಆಟ ಆಡಿದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ನಡೆದಿದೆ.
ಬನಹಟ್ಟಿ ಗ್ರಾಮದಲ್ಲಿ ಹನುಮಂತ ದೇವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನ ಹಾಗೂ ಕಳಸಾರೋಹನ ಹಿನ್ನಲೆ, ಗ್ರಾಮದ ಜನರು ಹನುಮಂತ ದೇವರ ಓಕುಳಿ ಆಟವಾಡಿದ್ದಾರೆ. ಓರ್ವ ಮಹಿಳೆ ದೊಣ್ಣೆ ಹಿಡಿದು ನೀರು ಎರೆಚುವರಿಗೆ ಬೆನ್ನಟ್ಟು ಮೂಲಕ ಈ ಆಚರಣೆ ಮಾಡಲಾಯಿತು.
ಹನುಮಂತ ದೇವರ ಓಕುಳಿ ಆಟವಾಡಲು ಜನರು ಕೊರೋನಾ ಮರೆತಂತಾಗಿತ್ತು. ಓಕುಳಿ ನೋಡಲು ನೂರಾರು ಜನರು ನೆರೆದಿದ್ರು.
ಯಾವುದೇ ಮಾಸ್ಕ್ ಹಾಗೂ ದೈಹಿಕ ಅಂತರ ಇಲ್ಲದೇ ಜನ ಈ ಆಚರಣೆಯಲ್ಲಿ ಭಾಗಿಯಾಗಿದ್ರು. ಕೊರೋನಾ ವೈರಸ್ ಸಿಕ್ಕ ಸಿಕ್ಕವರನ್ನ ಬಲಿ ಪಡೆಯುತ್ತಿರುವ ಸಂದರ್ಭದಲ್ಲಿ ಓಕುಳಿ ಮೂಲಕ ಜನರು ಬೇಜವಾಬ್ದಾರಿ ವರ್ತನೆ ತೋರಿದರು. ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡಿದರೂ ಲಾಕ್ ಡೌನ್ ನಿಯಮ ಉಲ್ಲಂಘಿಸಿ ಓಕುಳಿ ಹಬ್ಬ ಆಚರಿಸಿದರು. ಗ್ರಾಮ ಪಂಚಾಯತ ಹಾಗೂ ಪೋಲಿಸ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿ ಬಂದಿದ್ದು, ನರಗುಂದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.