ಗದಗ : ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇಷ್ಟಾದರು ಜನರು ಮಾತ್ರ ಅನಾವಶ್ಯಕವಾಗಿ ಓಡಾಡುವುದನ್ನು ಬಿಡುತ್ತಿಲ್ಲ. ಹೀಗಾಗಿ ಗಜೇಂದ್ರಗಡ ಪಿಎಸ್ ಐ ಅವರು ಸೈಕಲ್ ಮೇಲೆ ಏರಿ ಜಾಗೃತಿ ಮೂಡಿಸಿದ್ದಾರೆ.
ಪಿಎಸ್ ಐ ಗುರುಶಾಂತ ಅವರು ಜನರಲ್ಲಿ ಜಾಗೃತಿ ಮೂಡಿಸಿದ ಅಧಿಕಾರಿಯಾಗಿದ್ದು ಸೈಕಲ್ ಏರಿ ಪಟ್ಟಣದ ತುಂಬೆಲ್ಲ ಸುತ್ತಾಡಿ ಜನರಲ್ಲಿ ಕೊರೊನಾ ಲಾಕ್ಡೌನ್ ಜಾಗೃತಿ ಮೂಡಿಸಿದ್ದಾರೆ. ಪಟ್ಟಣದ ದುರ್ಗಾ ವೃತ್ತ, ಅಬೇಡ್ಕರ್ ವೃತ್ತ, ಜೋಡು ರಸ್ತೆಯ ಹತ್ತಿರ ಸುತ್ತಾಡಿ ಜನರಲ್ಲಿ ಕೊರೊನಾ ಬಗ್ಗೆ ತಿಳುವಳಿಕೆ ಮೂಡಿಸಿದ್ದಾರೆ.
ಬೈಕ್ ಏರಿ ಬಂದವರನ್ನು ತಡೆದು ಈ ಸಂದರ್ಭದಲ್ಲಿ ಪಿಎಸ್ ಐ ಗುರುಶಾಂತ ಬುದ್ಧಿ ಹೇಳಿದ್ದಾರೆ. ಅಲ್ಲದೇ ಅನಗತ್ಯವಾಗಿ ಸುತ್ತಾಡಿದವರಿಗೆ ಚಳಿ ಕೂಡ ಬಿಡಿಸಿದ್ದಾರೆ.