ಬೆಂಗಳೂರು: ಕೊರೋನಾ ಟೆಸ್ ಮಾಡಿಸಿಕೊಳ್ಳಲು ಭಯಭೀತರಾದ ಹಾಸ್ಟೆಲ್ ವಿದ್ಯಾರ್ಥಿನಿಯರು ಕಾಂಪೌಂಡ್ ಹಾರಿ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ಬೆಂಗಳೂರಿನ ಜಿಕೆವಿಕೆ ಕಾಲೇಜಿನಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ.
ಈಗಾಗಲೇ ಪಾಸಿಟಿವ್ ಬಂದ ವಿಧ್ಯಾರ್ಥಿಗಳನ್ನು ಐಸೋಲೇಷನ್ ನಲ್ಲಿ ಇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರ್ಯಾಂಡಮ್ ಆಗಿ ಎಲ್ಲಾ ವಿದ್ಯಾರ್ಥಿನಿಯರನ್ನು ಕೊರೋನಾ ಟೆಸ್ಟ್ ಮಾಡಿಸಲಾಗುತ್ತಿದೆ.
ವಿದ್ಯಾರ್ಥಿನಿಯರು ಹಾಸ್ಟೆಲ್ ನಿಂದ ಮನೆಗೆ ಹೋಗುವಾಗ ಕೂಡ ಟೆಸ್ಟ್ ಮಾಡಿಸಬೇಕು ಎಂದು ತಾಕೀತು ಮಾಡಲಾಗಿತ್ತು. ಆದರೆ ಅದೇಕೊ ಏನೊ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿದ ಜಿಕೆವಿಕೆ ವಿದ್ಯಾರ್ಥಿನಿಯರು ಕಾಂಪೌಂಡ್ ಹಾರಿ ಗ್ರೇಟ್ ಎಸ್ಕೇಪ್ ಆಗಿದ್ದಾರೆ.
ವಿದ್ಯಾರ್ಥಿನಿಯರು ಕಾಂಪೌಂಡ್ ಹಾರುತ್ತಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.