ಅಧಿಕಾರಿಗಳನ್ನು ನೋಡಿ ವಧುವನ್ನು ಬಿಟ್ಟು ವೇದಿಕೆಯ ಮೇಲಿದ್ದಾಗಲೇ ವರ ಪರಾರಿಯಾದ ಪ್ರಸಂಗ ಚಿಕ್ಕಮಗಳೂರಿನ ಕಡೂರು ತಲೂಕಿನ ಕರಿಕಲ್ಲಳ್ಳಿಯಲ್ಲಿ ನಡೆದಿದೆ.
ಕೊವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜಿಸಲಾಗಿದ್ದು, ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳು ಭೇಟಿ ಮಾಡಿದ್ದು, ಅಧಿಕಾರಿಗಳನ್ನು ನೋಡುತ್ತಲೇ ವರ ಸೇರಿದಂತೆ ಜನರು ಪರಾರಿಯಾಗಿದ್ದಾರೆ.
ಅಧಿಕಾರಿಗಳು ನೋಡುತ್ತಿದ್ದಂತೆ ಭರ್ಜರಿ ಭೋಜನವನ್ನೂ ಬಿಟ್ಟು ಜನರು ಪರಾರಿಯಾಗಿದ್ದಾರೆ.
ಕೊರೊನಾ ನಡುವೆಯೂ ಅದ್ದೂರಿಯಾಗಿ ಜೋಡಿ ಮದುವೆ ಆಯೋಜಿಸಲಾಗಿದ್ದು, 10 ಜನರಿಗೆ ಅನುಮತಿ ಪಡೆದು ನೂರಾರು ಜನರು ಮದುವೆ ಸಮಾರಂಭದಲ್ಲಿ ಭಾಗಿಯಾಗದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು.
ಸ್ಥಳಕ್ಕೆ ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿದ್ದು, ಅಧಿಕಾರಿಗಳನ್ನು ಗುರುತಿಸುತ್ತಿದ್ದಂತೆ ವರ ಹಾಗೂ ಜನರು ಓಡಿ ಹೋಗಿದ್ದಾರೆ.