ವರದಿ: ಶೃತಿ ರಿಪ್ಪನ್ಪೇಟೆ
ಬೆಂಗಳೂರು: ನಟಿ ಹರ್ಷಿಕಾ ಪೂಣಚ್ಚ, ಇತ್ತೀಚಿಗೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಸದ್ಯ ಫೋಟೋಶೂಟ್ ಮೂಲಕ ಮತ್ತೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ.
ಕನ್ನಡ ಚಿತ್ರರಂಗದಿಂದ ದೂರಾದ ಮಾತ್ರಕ್ಕೆ ಸಿನಿಮಾ ಬಿಟ್ಟಿಲ್ಲ. ಬೇರೆ ಭಾಷೆಯ ಸಿನಿಮಾಗಳಲ್ಲಿ ಹರ್ಷಿಕಾ ಬ್ಯುಸಿಯಾಗಿದ್ದಾರೆ. ಈಗ ಹರ್ಷಿಕಾ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸ್ಮೈಲಿಂಗ್ ಕ್ವೀನ್‍ನ ಡಿಫರೆಂಟ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಗೋವಿಂದ್ ಜೊತೆ ಆಕ್ಟ್ ಮಾಡಿ ಗಮನ ಸೆಳೆದಿದ್ದ ಹರ್ಷಿಕಾ ಈಗ ಜವಾರಿ ಲುಕ್‍ನಲ್ಲಿ ಪಡ್ಡೆ ಹುಡುಗರ ಕಣ್ಣು ಕುಕ್ಕುತ್ತಿದ್ದಾರೆ. ಅವರ ಈ ಹೊಸ ಲುಕ್ ನೋಡಿ, ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಚಟುವಟಿಕೆಯಿಂದಿರುವ ಆಗಿರೋ ಹರ್ಷಿಕಾ, ಈಗ ಫೋಟೋಶೂಟ್ ಮೂಲಕ ಸೌಂಡ್ ಮಾಡ್ತಿದ್ದಾರೆ.
ಹರ್ಷಿಕಾ, ನೀಲಿ ಬಣ್ಣದ ಸೀರೆ, ಕೆಂಪು ರವಿಕೆ ಮತ್ತು ಅದಕ್ಕೊಪ್ಪುವ ಆಭರಣ ಧರಿಸಿ ಕೂಲಿಂಗ್ ಗ್ಲಾಸ್‍ನಲ್ಲಿ ಸಖತ್ ಕೂಲಾಗಿ ಕಾಣಿಸುತ್ತಿದ್ದಾರೆ ಹಾಟ್ ಬ್ಯೂಟಿ ಹರ್ಷಿಕಾ.. ಟ್ರೆಡಿಷನಲ್ ಲುಕ್ಗೆ ಮಾರ್ಡನ್ ಟಚ್ ಕೊಟ್ಟು ಮಾಡಿರೋ ಕ್ಲಾಸ್ಟೂಮ್‍ನಲ್ಲಿ ಹರ್ಷಿಕಾ ನೋಡೋದೇ ಚೆಂದ ಅಂತ ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.