ಹಿಜಾಬ್ ವಿವಾದದ ಕುರಿತು ಹೈಕೋರ್ಟ್ ತೀರ್ಪು ಪ್ರಕಟವಾದ ಬಳಿಕವೂ ಕಾವು ತಣ್ಣಗಾಗಿಲ್ಲ. ಹೈಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿಯರು ಮತ್ತು ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೊಂದೆಡೆ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಕೆಲವು ಮುಖಂಡರಿಂದ ಕೊಲೆ ಬೆದರಿಕೆಗಳು ಬರುತ್ತಿವೆ.
ಹಿಜಾಬ್ ನಿಷೇಧ ವಿಚಾರವಾಗಿ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಸಿಜೆ ರಿತು ರಾಜ್ ಅವಸ್ಥಿ ಅವರಿಗೆ ಬಹಿರಂಗ ಕೊಲೆ ಬೆದರಿಕೆ ಒಡ್ಡುವ ವಾಟ್ಸಾಪ್ ವಿಡಿಯೋವನ್ನು ಸ್ವೀಕರಿಸಿದ್ದಾಗಿ ವಕೀಲ ಎಸ್ ಉಮಾಪತಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಹೇಳಿದ್ದಾರೆ. “ನನ್ನ ಸಂಪರ್ಕ ಸಂಖ್ಯೆ ಒಂದರಿಂದ ಬೆಳಿಗ್ಗೆ 9.45ರ ಸುಮಾರಿಗೆ ನನಗೆ ವಾಟ್ಸಾಪ್ ವಿಡಿಯೋ ಸಂದೇಶ ಬಂದಿತ್ತು. ಆ ವಿಡಿಯೋ ಸಂದೇಶವು ತಮಿಳು ಭಾಷೆಯಲ್ಲಿತ್ತು. ಅದನ್ನು ಕೇಳಿದಾಗ ನನಗೆ ಆಘಾತವಾಯಿತು ಎಂದು ಹೇಳಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇತರರನ್ನು ಗುರಿಯಾಗಿಸಿ ಬಹಿರಂಗ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಅವರು ರಿಜಿಸ್ಟ್ರಾರ್‌ಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
“ಮುಖ್ಯ ನ್ಯಾಯಮೂರ್ತಿ ಅವರು ಎಲ್ಲಿ ವಾಯು ವಿಹಾರಕ್ಕೆ ಹೋಗುತ್ತಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದು ಆತ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಬಂಧಿಸಿದಂತೆ ತಮಿಳುನಾಡು ಪೊಲೀಸರು ಶನಿವಾರ ಇಬ್ಬರನ್ನು ಬಂಧಿಸಿದ್ದಾರೆ. ತಿರುನಲ್ವೇಲಿಯ ಕೋವೈ ರಹಮತುಲ್ಲಾ ಮತ್ತು ಎಸ್ ಜಮಾಲ್ ಮೊಹಮ್ಮದ್ ಉಸ್ಮಾನಿ ಎಂಬಾತನನ್ನ ತಂಜಾವೂರಿನಲ್ಲಿ ಬಂಧಿಸಲಾಗಿದೆ.
0 98 1 minute read