ಬೀಜಿಂಗ್: ವರನಿಗೆ ಮದುವೆಗೆ ಕೆಲವೇ ನಿಮಿಷಗಳ ಮುನ್ನ ತಾನು ವರಿಸುತ್ತಿರುವ ವಧು ಎಂದು ತಿಳಿದಿದೆ. ಇದು ವಿಚಿತ್ರ ಎನ್ನಿಸುವ ಘಟನೆ. ಈ ಅಪರೂಪದ ಘಟನೆ ನಡೆದಿರುವುದು ಚೀನಾದಲ್ಲಿ. ಮದುವೆಗೆ ಇನ್ನೇನು ಕೆಲವೇ ಕ್ಷಣಗಳಿವೆ ಎನ್ನುವಾಗ ತಾನು ವರಿಸುತ್ತಿರುವ ವಧು ತನ್ನ ತಂಗಿ ಎಂದು ತಿಳಿದಿದೆ.
ವಧುವಿನ ಕೈಲಿದ್ದ ಮಚ್ಚೆಯಿಂದಾಗಿ ಈ ಸತ್ಯ ಬಯಲಾಗಿದೆ. ವಧುವನ್ನು ಹಿಡಿದುಕೊಂಡ ವರನ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಘಟನೆ ಜಿಯಾಂಗ್ಸು ಪ್ರದೇಶದಲ್ಲಿ ನಡೆದಿದೆ.
20 ವರ್ಷಗಳ ಹಿಂದೆ ಕಳೆದು ಹೋಗಿದ್ದ ಮಗಳನ್ನು ತಾಯಿ ಪತ್ತೆ ಹಚ್ಚಿದ್ದಾಳೆ. ಈ ಬಗ್ಗೆ ವಧುವಿನ ಪಾಲಕರಿಗೆ ಕೇಳಿದಾಗ, ವಧು 20 ವರ್ಷಗಳ ಹಿಂದೆ ರಸ್ತೆಯಲ್ಲಿ ಸಿಕ್ಕಿದ್ದಳು ಎಂದಿದ್ದಾರೆ. ಆದ್ರೆ ಮದುವೆಗೆ ಈ ಸಂಗತಿ ಯಾವುದೇ ಅಡ್ಡಿಯಾಗಿಲ್ಲ.
ವಧುವಿನ ಹೆತ್ತ ತಾಯಿ ಮದುವೆಗೆ ಒಪ್ಪಿಗೆ ಕೊಟ್ಟಿದ್ದಾಳೆ. ನಂತರ ಇಬ್ಬರ ವಿವಾಹ ನೆರವೇರಿದೆ. ಹೌದು ಇಡೀ ಘಟನೆಗೆ ತಿರುವು ಸಿಕ್ಕಿದ್ದೇ ಮತ್ತೊಂದು ಸತ್ಯ ಗೊತ್ತಾದ ಮೇಲೆ. ತನ್ನ ಮಗಳನ್ನು ಕಳೆದುಕೊಂಡ ಮೇಲೆ ಯುವತಿಯ ಹೆತ್ತವರು 20 ವರ್ಷಗಳ ಹಿಂದೆ ಮಗನನ್ನು ಕೂಡಾ ದತ್ತು ಪಡೆದುಕೊಂಡಿದ್ದರು.
ಹಾಗಾಗಿ ಯಾವುದೇ ಅಡೆತಡೆಗಳಿಲ್ಲದೆ ಈ ವಿವಾಹವನ್ನು ನೆರೆವೇರಿಸಲಾಯಿತು. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.