ಬಳ್ಳಾರಿಯಲ್ಲಿ(Ballari) ರಿಪಬ್ಲಿಕ್ ಈಗ ಛಿದ್ರ ಛಿದ್ರ ಆಗಿದೆ. ಈಗ ಈ ಭಾಗದಲ್ಲಿ ರಿಪಬ್ಲಿಕ್ ಆಫ್ ಚಿಕ್ಕಬಳ್ಳಾಪುರ ಶುರುವಾಗಿದೆ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ (Ugrappa) ಆರೋಪಿಸಿದ್ದಾರೆ .
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ರಿಪಬ್ಲಿಕ್ ನ ಮಹಾನ್ ನಾಯಕರು ಯಾರು ಅಂತ ನಿಮ್ಮ ಊಹೆಗೆ ಬಿಡ್ತೇನೆ. ಚಿಕ್ಕಬಳ್ಳಾಪುರ ರಿಪಬ್ಲಿಕ್ ನಲ್ಲಿ ಎಷ್ಟು ಕಮಿಷನ್ ನಡೀತಿದೆ ಎಂದು ಪ್ರಶ್ನಿಸಿದ್ದಾರೆ .ಕಲ್ಲು ಗಣಿಗಾರಿಕೆಯಿಂದ ಹಿಡಿದು ಯಾವ ಯಾವ ಇಲಾಖೆಯಲ್ಲಿ ಎಷ್ಟು ಕಮಿಷನ್ ತೆಗೆದುಕೊಳ್ತಿದ್ದಾರೆ ಅಂತ ಗೊತ್ತಿದೆ. ರಾಜ್ಯ ಸರ್ಕಾರದ 40% ಕಮಿಷನ್ ರೀತಿ ಇಲ್ಲಿಯೂ ಬಹುದೊಡ್ಡ ರೀತಿಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ .ಮುಂದಿನ ದಿನಗಳಲ್ಲಿ ದಾಖಲೆಗಳನ್ನು ಸಂಗ್ರಹಿಸಿ ಮಾಹಿತಿ ನೀಡುವೆ ಎಂದು ಆರೋಗ್ಯ ಸಚಿವ ಡಾ ಕೆ.ಸುಧಾಕರ್ (DR.K.Sudhakar) ವಿರುದ್ಧ ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ . ಇದನ್ನೂ ಓದಿ : – ಬೊಮ್ಮಾಯಿಯನ್ನ ನಂಬಿ ಮೋಸ ಹೋಗ್ತಿದೀವಿ – ಜಯಮೃತ್ಯುಂಜಯ ಸ್ವಾಮೀಜಿ ಗಂಭೀರ ಆರೋಪ