ಎಗ್ ಪ್ರಿಯರಿಗೆ ಇಲ್ಲೊಂದು ಸೂಪರ್ ರೆಸಿಪಿ ಇದೆ. ಎಗ್ ನಲ್ಲಿ ಮಾಡುವ ಎಲ್ಲ ರೆಸಿಪಿಗಳು ಸಿಂಪಲ್. ಅದರಂತೆ ಇಂದು ನಾವು ಮಸಾಲಾ ಎಗ್ ಭುರ್ಜಿ ಮಾಡುವುದು ಹೇಗೆ ಎಂಬುದನ್ನು ಸಿಂಪಲ್ ಆಗಿ ತಿಳಿಸಿಕೊಡುತ್ತೇವೆ.
ಬೇಕಾಗಿರುವ ಪದಾರ್ಥಗಳು
ಎಣ್ಣೆ – 2 ಸ್ಪೂನ್
ಬೆಣ್ಣೆ – 3 ಸ್ಪೂನ್
ಬೆಳ್ಳುಳ್ಳಿ – 1 ಸ್ಪೂನ್
ಹಸಿರು ಮೆಣಸಿನಕಾಯಿ – 2
ಶುಂಠಿ – 2 ಸ್ಪೂನ್
ಕರಿಬೇವಿನ ಎಲೆ – 6-7
ಕಟ್ ಮಾಡಿದ ಈರುಳ್ಳಿ – 1/2 ಕಪ್
ಉಪ್ಪು – 3 ಸ್ಪೂನ್
ಅರಿಶಿನ ಪುಡಿ – 2 ಸ್ಪೂನ್
ಮೆಣಸಿನ ಪುಡಿ – 2 ಸ್ಪೂನ್
ಪಾವ್ ಭಾಜಿ ಮಸಾಲಾ – 1 1/2 ಸ್ಪೂನ್
ಕೊತ್ತಂಬರಿ ಸೊಪ್ಪು – 1 ಸ್ವಲ್ಪ ಇದನ್ನೂ ಓದಿ :- ಸಿಂಪಲ್ ಆಗಿ ಮಾಡಿ ಚಿಕನ್ ಕರಿ – ಮನೆ ಮಂದಿಯೆಲ್ಲ ಟೇಸ್ಟ್ ಸವಿಯಿರಿ
ಮಾಡುವ ವಿಧಾನ :-
ಎಗ್ ಬೇಯಿಸಿ ಅವುಗಳನ್ನು ಚಿಕ್ಕ-ಚಿಕ್ಕದಾಗಿ ಕಟ್ ಮಾಡಿ. ಬಾಣಲೆಗೆ ಎಣ್ಣೆಯನ್ನು ಹಾಕಿ ಅದಕ್ಕೆ ಬೆಣ್ಣೆ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ ಮತ್ತು ಶುಂಠಿ ಸೇರಿಸಿ ಗೋಲ್ಡನ್ ಬ್ರೌನ್ ಬರುವವರೆಗೂ ಚೆನ್ನಾಗಿ ಫ್ರೈ ಮಾಡಿ. ಈಗ ಕರಿಬೇವಿನ ಎಲೆಗಳು ಮತ್ತು ಕತ್ತರಿಸಿದ ಈರುಳ್ಳಿಯನ್ನು ಬಾಣಲೆಗೆ ಮಿಶ್ರಣ ಮಾಡಿ ಒಟ್ಟಿಗೆ ಹುರಿಯಿರಿ. ಉಪ್ಪು, ಅರಿಶಿನ ಪುಡಿ, ಮೆಣಸಿನ ಪುಡಿ, ಪಾವ್ ಭಾಜಿ ಮಸಾಲಾ ಮಿಶ್ರಣ ಮಾಡಿ. ಕೊನೆಗೆ ಕಟ್ ಮಾಡಿದ ಎಗ್, ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಟೊಮೆಟೊ ಹಾಕಿ ಫ್ರೈ ಮಾಡಿ. ಕೊನೆಗೆ ಸ್ವಲ್ಪ ಬೆಣ್ಣೆಯನ್ನು ಹಾಕಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಎಗ್ ಭುರ್ಜಿ ಸವಿಯಲು ಸಿದ್ದವಾಗುತ್ತೆ.
ಇದನ್ನೂ ಓದಿ :- ಸಿಂಪಲ್ ಆಗಿ ತಮಿಳುನಾಡಿನ ಚೆಟ್ಟಿ ನಾಡ್ ಪ್ರದೇಶದ ಫಿಶ್ ಫ್ರೈ ಮಾಡೋದು ಹೇಗೆ ಗೊತ್ತಾ..?