ಬಾಲಿವುಡ್ ಕರಾಳ ಮುಖ ತೆರೆದಿಟ್ಟ ನಟಿ ರಾಧಿಕಾ ಅಪ್ಟೆ

ಬಾಲಿವುಡ್ ಕರಾಳ ವಿಚಾರಗಳನ್ನು ಬಾಲಿವುಡ್ (Bollywood) ನಟಿ ರಾಧಿಕಾ ಅಪ್ಪೆ ಬಹಿರಂಗಪಡಿಸಿದ್ದಾರೆ. ಚಿತ್ರರಂಗದಲ್ಲಿ ರಾಧಿಕಾ ಅಪ್ಪೆ (Radhika Apte) ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ.

ವೆಬ್ ಸಿರೀಸ್ಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ. ಇದೀಗ ಅವರು ಅನೇಕ ವಿಚಾರಗಳನ್ನು ಅವರು ಬಯಲಿಗೆ ಎಳೆದಿದ್ದಾರೆ. ಆರಂಭದ ದಿನಗಳಲ್ಲಿ ಸ್ತನ, ಮೂಗು, ಕಾಲು ಸೇರಿದಂತೆ ದೇಹದ ಅನೇಕ ಭಾಗಗಳಿಗೆ ಪ್ಲಾಸ್ಟಿಕ್ ಸರ್ಜರಿ (Plastic Surgery) ಮಾಡಿಸಿಕೊಳ್ಳುವಂತೆ ಕೆಲವರು ಹೇಳಿದ್ದರು ಎಂಬುದನ್ನು ರಾಧಿಕಾ ಅಪ್ಟೆ ಈಗ ಬಾಯಿ ಬಿಟ್ಟಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ.“ಫಾರೆನ್ಸಿಕ್ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ರಾಧಿಕಾ ಅಪ್ಟೆ ಶಾಕಿಂಗ್ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಇದನ್ನೂ ಓದಿ  : – ಅಮ್ಮನಿಗೆ ಭಾವುಕವಾಗಿ ಹುಟ್ಟುಹಬ್ಬದ ಶುಭ ಕೋರಿದ ಐಶ್ವರ್ಯಾ ರೈ

ಅವಕಾಶ ಕೇಳಿಕೊಂಡು ಚಿತ್ರರಂಗಕ್ಕೆ ಬರುವ ಹೆಣ್ಣುಮಕ್ಕಳನ್ನು ಸೌಂದರ್ಯದ ಹೆಸರಿನಲ್ಲಿ ದಾರಿ ತಪ್ಪಿಸುವವರು ಹಲವರಿದ್ದಾರೆ ಎಂದು ಹೇಳಿದ್ದಾರೆ. ಆರಂಭದಲ್ಲಿ ದೇಹ ಮತ್ತು ಮುಖಕ್ಕೆ ಹಲವು ಮಾರ್ಪಾಡು ಮಾಡಿಕೊಳ್ಳುವಂತೆ ಹೇಳಲಾಗಿತ್ತು. ಮೊದಲ ಭೇಟಿಯಲ್ಲಿ ಮೂಗು ಬದಲಾಯಿಸಿಕೊಳ್ಳುವಂತೆ ಹೇಳಿದ್ದರು. ಎರಡನೇ ಬಾರಿ ಭೇಟಿ ಆದಾಗ ಸ್ತನಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಕೊಳ್ಳುವಂತೆ ಸೂಚಿಸಿದ್ದರು. ಕಾಲು, ದವಡೆ, ಗಲ್ಲ.. ಹೀಗೆ ಮುಂದುವರಿಯಿತು ಎಂದಿದ್ದಾರೆ ರಾಧಿಕಾ ಅಪ್ಟೆ. ಇದನ್ನೂ ಓದಿ : – ಕರಣ್ ಜೋಹರ್ ಪಾರ್ಟಿಯಲ್ಲಿ ಹೊಸ ಗೆಳತಿಯನ್ನ ಪರಿಚಯಿಸಿದ ಹೃತಿಕ್ ರೋಶನ್

Related Articles

Leave a Reply

Your email address will not be published. Required fields are marked *

Back to top button
Close

Adblock Detected

Support Free Content We use ads to keep our content free for you. Please allow ads and let sponsors fund your surfing. Thank you!