ನಾನೀಗ ದೇಶ ಉಳಿಸಬೇಕು. ಹಾಗಾಗಿ ನರೇಂದ್ರ ಮೋದಿಗೆ ಬೆಂಬಲ ಕೊಡಬೇಕು ಅಂತ ಇಲ್ಲಿಗೆ ಬಂದಿದ್ದೀನಿ. ಆ ಸಿಡಿ ಲೇಡಿ ವಿಷಯವನ್ನು ಸಿದ್ದರಾಮಯ್ಯನಿಗೆ ಬಿಟ್ಟು ಕೊಟ್ಟಿದ್ದೀನಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಸೋಮವಾರ ಮಾತನಾಡಿದ ಅವರು, ಸಿಡಿ ಲೇಡಿ ಪ್ರಕರಣದಲ್ಲಿ ತಿರುವು ಪಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅಲ್ಲದೇ ಈಗ ಸಿಡಿ ಲೇಡಿ ಎಲ್ಲವನ್ನೂ ಸಹ ಅವರಿಗೆ ಬಿಟ್ಟಿದ್ದಿನಿ, ಆ ಯಮ್ಮನ ಸುದ್ದಿ ತಗೊಂಡು ನಾನೇನ್ರಿ ಮಾಡ್ಲಿ? ಎಂದರು.
ಸಿಡಿ ಪ್ರಕರಣ ಬಗ್ಗೆ ಮುಂಚೆ ಏನಾದರೂ ಹೇಳಿದ್ದೀನಾ? ಅದರ ಬಗ್ಗೆ ಮಾತನಾಡೋಕೆ ವಾಕರಿಗೆ ಬರುತ್ತೆ. ಸಿಡಿ ಪ್ರಕರಣದ ಬಗ್ಗೆ ನನ್ನ ಕೇಳಬೇಡಿ. ಅದನ್ನ ಕಾಂಗ್ರೆಸ್ ನವರಿಗೆ ಬಿಟ್ಟಿದ್ದಿನಿ, ಇದು ವೈಭವಿಕರಿಸೋ ಸುದ್ದಿ ಅಲ್ಲ, ಇದನ್ನ ರಾಜಕೀಯವಾಗಿ ಬಳಸೋಕೆ ಅವರು ಇಷ್ಟಪಡಬಾರದು. ನಾವು ಅದನ್ನ ರಾಜಕೀಕರಣಗೊಳಿಸಲ್ಲ ಎಂದು ಈಶ್ವರಪ್ಪ ಹೇಳಿದರು.