ಜೆಡಿಎಸ್ ನಲ್ಲಿ ನನಗೆ ಅಪಮಾನ ಆಗಿದೆ. ಆದ್ದರಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ನಾನು ಪಕ್ಷ ತೊರೆಯುತ್ತಿರುವ ಸಂದೇಶ ತಲುಪಿಸಿದ್ದೇನೆ ಎಂದು ಮೈಸೂರು ಶಾಸಕ ಜಿಟಿ ದೇವೇಗೌಡ ಹೇಳಿದ್ದಾರೆ.
ಮೈಸೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇವೇಗೌಡರು ನೀನು ಮರಿ ದೇವೇಗೌಡ ಎಂದು ಪ್ರಶಂಸಿಸಿದ್ದಾರೆ. ನನಗೆ ಅವರು ದೇವರ ಸಮಾನ ಅಂತನೂ ಹೇಳಿದ್ದೇನೆ. ಆದರೆ ಇತ್ತೀಚಿನ ಪರಿಸ್ಥಿತಿ ಸರಿಯಿಲ್ಲ. ಹಾಗಾಗಿ ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದರು.
ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನನ್ನ ಜೊತೆ ಮಾತನಾಡಿದ್ದಾರೆ. ಆದರೆ ನಾನು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಇನ್ನೂ 12 ತಿಂಗಳು ಜೆಡಿಎಸ್ ನಲ್ಲಿಯೇ ಮುಂದುವರಿಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.