ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಯನ್ನು 3-0ಯಿಂದ ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ ನೂತನವಾಗಿ ಬಿಡುಗಡೆ ಆದ ಐಸಿಸಿ ಟಿ-20 ರ್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದೆ.
ಸೋಮವಾರ ಬಿಡುಗಡೆ ಆದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ 6 ವರ್ಷಗಳ ನಂತರ ಭಾರತ ಅಗ್ರಸ್ಥಾನಕ್ಕೇರಿದೆ. 2016 ಫೆಬ್ರವರಿಯಲ್ಲಿ ಭಾರತ ಕೊನೆಯ ಬಾರಿಗೆ ಅಗ್ರಸ್ಥಾನ ಅಲಂಕರಿಸಿತ್ತು.
2021ರ ವಿಶ್ವಕಪ್ ನಲ್ಲಿ ಭಾರತ ಸೂಪರ್ 12 ಲೀಗ್ ನಲ್ಲಿಯೇ ಹೊರಬಿದ್ದಿತ್ತು. ಇದರಿಂದ ಅಗ್ರಸ್ಥಾನದಿಂದ ಮತ್ತಷ್ಟು ಕೆಳಗೆ ಜಾರಿತ್ತು.
ಪ್ರಸ್ತುತ ಭಾರತ ಮತ್ತು ಇಂಗ್ಲೆಂಡ್ 269 ಅಂಕದೊಂದಿಗೆ ಮಾನ ಸ್ಥಾನದಲ್ಲಿವೆ. ಆದರೆ ಭಾರತ 10484 ಅಂಕದೊಂದಿಗೆ ಮೇಲುಗೈ ಸಾಧಿಸಿದ್ದರೆ, ಇಂಗ್ಲೆಂಡ್ 10,474 ಅಂಕದೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. 266 ಅಂಕ ಪಡೆದಿರುವ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್ (255), ದಕ್ಷಿಣ ಆಫ್ರಿಕಾ (253), ಆಸ್ಟ್ರೇಲಿಯಾ (249), ವೆಸ್ಟ್ ಇಂಡೀಸ್ (235), ಆಫ್ಘಾನಿಸ್ತಾನ (232), ಶ್ರೀಲಂಕಾ (231), ಬಾಂಗ್ಲಾದೇಶ (231) ನಂತರದ ಸ್ಥಾನದಲ್ಲಿವೆ.