ಬೆಂಗಳೂರು : ಅಕ್ರಮವಾಗಿ ಕೋವಿಡ್ ವ್ಯಾಕ್ಸಿನೇಷನ್ ಮಾರಾಟ ಮಾಡುತ್ತಿದ್ದ ವೈದ್ಯೆಯು ಸಹಿತ ಇಬ್ಬರು ಆರೋಪಿಗಳನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಪುಷ್ಪಿತಾ(25) ಹಾಗೂ ಪ್ರೇಮಾ (34) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಪುಷ್ಪಿತಾ ಮಂಜುನಾಥನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಳು. ಈಕೆ ವ್ಯಾಕ್ಸಿನೇಷನ್ ಕದ್ದು ಅನ್ನಪೂರ್ಣೇಶ್ವರಿ ನಗರದ ಪ್ರೇಮಾ ಎನ್ನುವವರ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು. ಪ್ರೇಮಾ ಕರೆಸಿದ ವ್ಯಕ್ತಿಗಳಿಂದ ಹಣ ಪಡೆದು ಅಕ್ರಮವಾಗಿ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು. ಏ.23 ರಿಂದಲೂ ತಲಾ 500 ರೂ ಪಡೆದು ವ್ಯಾಕ್ಸಿನೇಷನ್ ಆರೋಪಿಗಳು ನೀಡಿದ್ದರು ಎನ್ನಲಾಗಿದೆ.
ಮಾಹಿತಿ ಆಧರಿಸಿ ವ್ಯಾಕ್ಸಿನೇಷನ್ ಪಡೆಯುವ ನೆಪದಲ್ಲಿ ತೆರಳಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ರೆಡ್ ಹ್ಯಾಂಡಾಗಿ ಆರೋಪಿಗಳನ್ನ ಬಂಧಿಸಿದ್ದಾರೆ. ಆರೋಪಿಗಳಿಂದ 1 ವ್ಯಾಕ್ಸಿನ್ ಕ್ಯಾರಿಯರ್, ಬಳಸಿದ ಹಾಗೂ ಬಳಸದ ಸಿರೀಂಜಸ್ ವಶಕ್ಕೆ ಪಡೆದಿದ್ದಾರೆ.