ಕೋವಿಡ್ ಹಿನ್ನೆಲೆ ಇಡೀ ನಗರವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೆ ನಮ್ಮ ಜ್ಞಾನಭಾರತಿ ಕ್ಯಾಂಪಸ್ ಫಾರೆಸ್ಟ್ ಪ್ರದೇಶದಲ್ಲಿ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಆಕ್ರಮ ಚಟುವಟಿಕೆಯ ಅಡ್ಡೆ ಮಾಡಿಕೊಂಡಿದ್ದಾರೆ.
ಕೋವಿಡ್ ನಿಯಮ ಪಾಲಿಸದೇ ಗುಂಪು ಗುಂಪಾಗಿ ಕ್ಯಾಂಪಸ್ ಒಳಗಡೆ ಪ್ರವೇಶಿಸಿ ಅಕ್ರಮವಾಗಿ ಜೂಜಾಟ ವಾಡುತ್ತಿದ್ದಾರೆ.. ಜೊತೆಗೆ ಮದ್ಯಪ್ರೀಯರ ಹಾವಳಿ ಕೂಡ ಜಾಸ್ತಿಯಾಗಿದೆ. ಹಗಲು ರಾತ್ರಿ ಎನ್ನದೇ ನಿರಂತರವಾಗಿ ಮದ್ಯ ಪ್ರೀಯರು ಮದ್ಯಪಾನ ಮಾಡ್ತಿದ್ದಾರೆ.
ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲಿಗಳಗಳನ್ನ ಎಸೆದು ಕಿಡಿಗೇಡಿಗಳು ವಿಕೃತ ಮೆರೆದಿದ್ದಾರೆ.. ಇದನ್ನ ಪ್ರಶ್ನಿಸಿದ್ರೆ ಸ್ಥಳೀಯರ ಮೇಲೆ ಗೂಂಡಾ ವರ್ತನೆ ತೋರುತ್ತಿದ್ದಾರೆ.. ಜ್ಞಾನ ಭಾರತಿ ಆವರಣದ ಎನ್ ಜಿ ಎಫ್ ಲೇಔಟ್ ಬಳಿಯ ಅರಣ್ಯದಲ್ಲಿ ಸ್ಥಳೀಯರು ಅನಗತ್ಯವಾಗಿ ಓಡಾಡುವವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ..