ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿ ಏಕ ಶಿಲೆ ಆಗಿ ಗೆಲುವು ಸಾಧಿಸುತ್ತಿದೆ. ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಮೂರು ಉಪ ಚುನಾವಣೆಯನ್ನು ಬಿಜೆಪಿ ಗೆಲ್ಲಲ್ಲಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ಬಿಜೆಪಿ ಪಕ್ಷದ ಸಂಘಟನಾತ್ಮಕವಾಗಿ ಗ್ರಾಮ ಗ್ರಾಮದಲ್ಲಿ ಬೇರು ಊರಿದೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಎಂಬ ಎರಡು ಗುಂಪುಗಳಿವೆ. ಇದಕ್ಕೆ ಮೈಸೂರು ಮೇಯರ್ ಚುನಾವಣಾ ಸಾಕ್ಷಿಯಾಗಿದೆ ಎಂದರು.
ಸಿಡಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಪಾತ್ರವಿದೆ ಎಂದು ಯುವತಿ ಪೋಷಕರ ಆರೋಪ ವಿಚಾರಕ್ಕೆ ಡಿಕೆ ಶಿವಕುಮಾರ್ ತಪ್ಪಿತಸ್ಥರೆಂಬ ಆರೋಪದ ಬಗ್ಗ ಸಿದ್ದರಾಮಯ್ಯ ಏನು ಹೇಳುತ್ತಿಲ್ಲ. ಅಂದಮೇಲೆ ಸಿಡಿ ಬಗ್ಗೆ ನಾನೇನು ಹೇಳಲಿ, ಸಿಡಿ ಬಗ್ಗೆ ನಾನು ಏನು ಹೇಳಲು ಇಷ್ಟ ಪಡುವುದಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ರಾಜ್ಯದ ಸಂಸದರು ಗುಲಾಮರು ಎಂಬ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅವರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗುಲಾಮರಾಗಿ ಅಂತಾ ತಲೆಯಲ್ಲಿ ಉಳಿದುಕೊಂಡಿದೆ. ಬಿಜೆಪಿಯಲ್ಲಿ ಪಕ್ಷದ ನಾಯಕರು ಏನು ಹೇಳ್ತಾರೆ ಹಾಗೂ ಪ್ರಧಾನಿ ಮೋದಿಯವರ ಮಾತುಗಳಿಗೆ ದೇಶದ ಜನತೆಯಲ್ಲ ವಿಶ್ವದ ಜನ ಗೌರವ ಕೊಡುತ್ತಾರೆ. ಗುಲಾಮರಿಗಿ ಪದ ಕಾಂಗ್ರೆಸ್ ಗೆ ಸಿಮೀತ ಹೊರತು ಗುಲಾಮಗಿರಿ ಪದ ಬಿಜೆಪಿ ಪಕ್ಷಕ್ಕೆ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.