ರಾಮನಗರ ಜಿಲ್ಲಾ ಕಾರಾಗೃಹದ ಮೇಲೆ ಮಂಗಳವಾರ ಬೆಳಂಬೆಳಗ್ಗೆ ದಾಳಿ ಮಾಡಿದ ಜಿಲ್ಲಾ ಎಸ್.ಪಿ. ಎಸ್.ಗಿರೀಶ್ ನೇತೃತ್ವದ ತಂಡ 54 ಸಾವಿರ ರೂ. ನಗದು, 5 ಮೊಬೈಲ್ ಹಾಗೂ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದೆ.
ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂದು ಹಲವು ಬಾರಿ ಜಿಲ್ಲಾ ಪೊಲೀಸ್ ಕಚೇರಿಗೆ ದೂರು ಬಂದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲಾ ಪೊಲೀಸರು ಜಿಲ್ಲಾ ಕಾರಗೃಹದ ಮೇಲೆ ಏಕಾಕಾಲಕ್ಕೆ ದಾಳಿ ನಡೆಸಿ ಜೈಲು ಸಿಬ್ಬಂದಿಗೆ ಶಾಕ್ ನೀಡಿದರು.
ಬೆಳಿಗ್ಗೆ ಏಕಾಕಾಲಕ್ಕೆ ಎಸ್ಪಿ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಿ ಎಲ್ಲಾ ಸೆಲ್ ಗಳನ್ನೂ ಪರಿಶೀಲಿಸಿದರು. ಈ ವೇಳೆ ಕೈದಿಗಳ ಬಳಿ ಅಕ್ರಮವಾಗಿ ಸಂಗ್ರಹದಲ್ಲಿದ್ದ ಸುಮಾರು 54 ಸಾವಿರ ರೂ ನಗದು, 5 ಮೊಬೈಲ್ ಫೋನ್‌ಗಳು 6 ಸಿಮ್ ಕಾರ್ಡ್‌ಗಳು, 60ಕ್ಕೂ ಹೆಚ್ಚು ಸಿಗರೇಟ್ ಪ್ಯಾಕ್‌ಗಳು, ಗುಟ್ಕಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಿಯಮದ ಪ್ರಕಾರ ಜೈಲಿನಲ್ಲಿ ಬೀಡಿ, ಸಿಗರೇಟ್, ಮಾದಕ ವಸ್ತು, ಮೊಬೈಲ್ ಬಳಕೆ ಮಾಡುವಂತಿಲ್ಲ. ಆದರೆ ಇವುಗಳನ್ನು ವಶಕ್ಕೆ ಪಡೆದ ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.