ಮದುವೆಗೆ ಬಂದಿದ್ದ 6 ಹೆಣ್ಣು ಮಕ್ಕಳು ಹಾಗೂ 7 ಮಹಿಳೆಯರು ಸೇರಿದಂತೆ 13 ಮಂದಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ಸಂಭವಿಸಿದೆ.
ಬುಧವಾರ ರಾತ್ರಿ ಸಂಭವಿಸಿದ ಈ ದುರಂತದಲ್ಲಿ ಮೃತಪಟ್ಟವರಲ್ಲಿ 1 ವರ್ಷದ ಮಗು ಹಾಗೂ 10 ವರ್ಷದ ಮಗು ಕೂಡ ಸೇರಿದೆ.
ಖುಷಿನಗರದಲ್ಲಿ ನಿಗದಿಯಾಗಿದ್ದ ಮದುವೆಗೆ ಬಂದಿದ್ದ ಅತಿಥಿಗಳಿಗೆ ಬಾವಿ ಮೇಲೆ ಹಾಕಿದ್ದ ಮರದ ತುಂಡುಗಳಿಂದ ಮುಚ್ಚಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಅತಿಥಿಗಳು ಇದರ ಮೇಲೆ ಕೂತಿದ್ದರಿಂದ ಭಾರ ತಡೆಯಲಾರದೇ ಕುಸಿದಿದ್ದು ಎಲ್ಲರೂ ಬಾವಿಯೊಳಗೆ ಬಿದ್ದಿದ್ದಾರೆ.
ಅರಿಶಿನ ಕಾರ್ಯಕ್ರಮದ ವೇಳೆ ರಾತ್ರಿ 8.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, 15 ಮಹಿಳೆಯರನ್ನು ರಕ್ಷಿಸಲಾಗಿದೆ.