ದೇಶದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 3 ಲಕ್ಷ ಗಡಿ ದಾಟಿದ್ದು, ಈ ಮೂಲಕ ಜಗತ್ತಿನಲ್ಲಿ ಕೊರೊನಾಗೆ ಅತೀ ಹೆಚ್ಚು ಬಲಿಯಾದವರ ಪಟ್ಟಿಯಲ್ಲಿ ಭಾರತ 3ನೇ ಸ್ಥಾನ ಪಡೆದಿದೆ.
ಕೊರೊನಾ ವೈರಸ್ 2ನೇ ಅಲೆಗೆ ಅತೀ ಹೆಚ್ಚು ಬಾಧೆಗೆ ಒಳಗಾಗಿರುವ ಭಾರತದಲ್ಲಿ ಅಧಿಕೃತವಾಗಿ ಭಾನುವಾರ ಕೊರೊನಾಗೆ ಬಲಿಯಾದವರ ಸಂಖ್ಯೆ 3 ಲಕ್ಷ ಗಡಿ ದಾಟಿದೆ. ಈ ಮೂಲಕ ಅಮೆರಿಕ ಮತ್ತು ಬ್ರೆಜಿಲ್ ನಂತರ ಭಾರತದಲ್ಲಿ ಅತೀ ಹೆಚ್ಚು ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.
ಭಾರತದಲ್ಲಿ ಪ್ರತಿದಿನ 4 ಲಕ್ಷ ಸೋಂಕು ಪ್ರಕರಣಗಳು ವರದಿಯಾಗುತ್ತಿದ್ದು, ಇದೀಗ 2 ಲಕ್ಷಕ್ಕೆ ಇಳಿಕೆಯಾಗಿದ್ದು, ಸಾವಿನ ಸಂಖ್ಯೆ ಮಾತ್ರ 4000 ಅಸುಪಾಸಿನಲ್ಲಿ ಪತ್ತೆಯಾಗುತ್ತಿವೆ.
ಪ್ರಸ್ತುತ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ 5,89,703 ಮಂದಿ ಬಲಿಯಾಗಿದ್ದು, 33,105,188 ಸೋಂಕು ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್ ನಲ್ಲಿ 4,48,208 ಮಂದಿ ಮೃತಪಟ್ಟಿದ್ದು, 16,047,439 ಸೋಂಕು ಪ್ರಕರಣಗಳು ಪತ್ತೆಯಾಗಿವೆ.
2019ರ ಅಂತ್ಯದಲ್ಲಿ ಚೀನಾದಲ್ಲಿ ಮೊದಲ ಬಾರಿ ಕಾಣಿಸಿಕೊಂಡ ಕೊರೊನಾ ವೈರಸ್ ಎಂಬ ಮಹಾಮಾರಿಗೆ ಜಾಗತಿಕವಾಗಿ ಇದುವರೆಗೆ 34,56,282 ಮಂದಿ ಮೃತಪಟ್ಟಿದ್ದಾರೆ.