ಬಾಗಲಕೋಟೆ : ಜಿಲ್ಲೆಯ ಬನಹಟ್ಟಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಅಂತರ್ ರಾಜ್ಯಮಟ್ಟದ ಮನೆಗಳ್ಳತನ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ ಒಟ್ಟು 6 ಲಕ್ಷ ರೂ. ಮೌಲ್ಯದ ಆಭರಣ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಂತರ್ ರಾಜ್ಯ ಕಳ್ಳತನ ಮಾಡುತ್ತಿದ್ದ ಆರೋಪಿ ವಿಜಯಪುರ ತಾಲೂಕಿನ ಹೊನ್ನಾಳ್ಳಿ ಗ್ರಾಮದ ಸಂತೋಷ ಶಿವಣ್ಣ ನಂದಿಹಾಳ(35) ಎಂಬುವ ಆರೋಪಿಯನ್ನು ಈ ಬಂಧಿಸಲಾಗಿದ್ದು, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ಹಲವಾರು ಜಿಲ್ಲೆಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ 30 ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, 2019 ರಲ್ಲಿ ಬೆಳಗಾವಿ ಜಿಲ್ಲೆಯ ರಾಮದುರ್ಗ ಉಪಕಾರ್ಯಾಗೃಹದಿಂದ ಪರಾರಿಯಾಗಿದ್ದನು.
ಎಲ್ಲ ಪ್ರಕರಣಗಳ ಪೈಕಿ 3 ಪ್ರಕಣಗಳಲ್ಲಿ ಈತನಿಗೆ ನ್ಯಾಯಾಲಯದಿಂದ ಶಿಕ್ಷೆಯಾಗಿದೆ. ಮುಧೋಳ, ಲೋಕಾಪುರ, ರಾಮದುರ್ಗ, ನಿಂಬರಗಾ, ಮಧನ ಹಿಪ್ಪರಗಾ, ಇಳಕಲ್ ಪೊಲೀಸ್ ಠಾಣೆಗಳ 16 ಪ್ರಕರಣಗಳಲ್ಲಿ ನ್ಯಾಯಲಯವು ಈತನ ವಿರುದ್ದ ಬಂಧನ ವಾರೆಂಟ್ ಹೊರಡಿಸಿದೆ.
ಮಂಗಳವಾರ ನಸುಕಿನ 2 ಗಂಟೆ ಸುಮಾರಿಗೆ ನೂಲಿನ ಗಿರಣಿ ಹತ್ತಿರ ಲಾರಿಯೊಂದನ್ನು ಹತ್ತುವ ಸಂದರ್ಭ ವ್ಯಕ್ತಿಯನ್ನು ಪರಿಶೀಲಿಸುತ್ತಿರುವಾಗ ಬ್ಯಾಗ್‌ನಲ್ಲಿದ್ದ ಮಾರಕಾಸ್ತ್ರ ಕಂಡು ಪೊಲೀಸರು ಠಾಣೆಗೆ ಕರೆದೊಯ್ದ ಸಂದರ್ಭ ಆರೋಪಿ ಬಗ್ಗೆ ಎಲ್ಲ ಪ್ರಕರಣಗಳ ಕುರಿತು ಮಾಹಿತಿ ಬೆಳಕಿಗೆ ಬಂದಿದೆ.
2019 ರಲ್ಲಿ ಬನಹಟ್ಟಿ, ನಾವಲಗಿ ಹಾಗು ಚಿಮ್ಮಡ ಗ್ರಾಮದಲ್ಲಿಯೂ ಆರೋಪಿತನ್ನ ಕೈಚಳಕ ತೋರಿಸಿದ್ದನು. ಯಶಸ್ವಿ ಕಾರ್ಯಾಚರಣೆಯಲ್ಲಿ ಸಿಪಿಐ ಜೆ. ಕರುಣೇಶಗೌಡ, ಪಿಎಸ್‌ಐಗಳಾದ ರವಿಕುಮಾರ ಧರ್ಮಟ್ಟಿ, ಮಲ್ಲಿಕಾರ್ಜುನ ತಳವಾರ, ಕಾನ್ಸ್ಸ್ಟೇಬಲ್ಗಳಾದ ವಿ.ಎಸ್. ಅಜ್ಜನಗೌಡರ, ಎ.ಎಂ.ಜಮಖಂಡಿ, ಎಸ್.ಅರ್. ಮುರಡಿ, ವಿಜಯ್ ತಂಬದ, ಎಸ್.ಎಚ್. ನಾಟಿಕಾರ, ಎಂ.ವಿ. ಹನಗಂಡಿ, ಡಿ.ವೈ. ಗುರಿಕಾರ, ಶ್ರೀಮತಿ ಎಲ್.ಜಿ. ಕುಂಬಾರ ಭಾಗಿಯಾಗಿದ್ದರು.