ಮೈಕ್ರೋಸಾಫ್ಟ್ (Microsoft)ನ ಜನಪ್ರಿಯ ವೆಬ್ ಬ್ರೌಸರ್ ಇಂಟರ್ನೆಟ್ ಎಕ್ಸ್ ಪ್ಲೋರರ್ (Internet Explorer) ಇಂದಿನಿಂದ ಸ್ಥಗಿತಗೊಳ್ಳಲಿದೆ. ಇಂಟರ್ನೆಟ್ ಎಕ್ಸ್ ಪ್ಲೋರರ್ ಅನ್ನು 27 ವರ್ಷಗಳ ಹಿಂದೆ, ಅಂದರೆ 1995 ರಲ್ಲಿ ವಿಂಡೋಸ್ 95 ಪಿಸಿಯಲ್ಲಿ ಪ್ರಾರಂಭಿಸಲಾಗಿತ್ತು.
ಆರಂಭದಲ್ಲಿ, ಬಳಕೆದಾರರು ಇದನ್ನು ಬಳಸಲು ಹಣವನ್ನು ಪಾವತಿಸಬೇಕಾಗಿತ್ತು. ಆದರೆ ಕಾಲಕ್ರಮೇಣ ಮೈಕ್ರೋಸಾಫ್ಟ್ ಎಕ್ಸ್ ಪ್ಲೋರರ್ (Internet Explorer) ಸೇವೆಯನ್ನು ಉಚಿತಗೊಳಿಸಿತ್ತು. ಇದೀಗ 27 ವರ್ಷಗಳ ಬಳಿಕ ಎಕ್ಸ್ ಪ್ಲೋರರ್ ಸೇವೆ ಅಂತ್ಯಗೊಳ್ಳುತ್ತಿದ್ದು, 90 ರ ದಶಕದಲ್ಲಿ ಕಂಪ್ಯೂಟ್ ಬಳಸಿದವರು ಎಕ್ಸ್ ಪ್ಲೋರರ್ ಜೊತೆಗಿನ ತಮ್ಮ ನೆನಪುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ ಕುರಿತು ಚರ್ಚಿಸಲು ನಾಳೆ ಮಮತಾ ಬ್ಯಾನರ್ಜಿ ಸಭೆ – ಕಾಂಗ್ರೆಸ್ , ಎನ್ ಸಿ ಪಿ ಭಾಗಿ
ಇದೀಗ ಮೈಕ್ರೋಸಾಫ್ಟ್ ಅಷ್ಟೇಟೆಡ್ ವೆಬ್ ಬ್ರೌಸರ್ ಆಗಿ ಮೈಕ್ರೋಸಾಫ್ಟ್ ಎಡ್ಜ್ ಅನ್ನು ಪರಿಚಯಿಸಿದೆ. ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸುವ ಬಳಕೆದಾರರು ಈಗ ಮೈಕ್ರೋಸಾಫ್ಟ್ ಎಡ್ಜ್ ನಲ್ಲಿ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯಲಿದ್ದಾರೆ. ಅಲ್ಲದೆ ಎಡ್ಜ್ ವೇಗವಾಗಿ ಮತ್ತು ಹೆಚ್ಚು ಸುರಕ್ಷಿತವಾಗಿದೆ ಎಂದು ಮೈಕ್ರೋಸಾಫ್ಟ್ ಹೇಳಿಕೊಂಡಿದೆ.ವಿಶೇಷವೆಂದರೆ ಮೈಕ್ರೋಸಾಫ್ಟ್ ಬಳಕೆದಾರರು ಇಂಟರ್ನೆಟ್ ಎಕ್ಸ್ ಪ್ಲೋರರ್ ಎಡ್ಜ್ (Microsoft Edge)ಪಡೆಯಬಹುದು. ಇದರಲ್ಲಿ ಬಳಕೆದಾರರು ಎಕ್ಸ್ ಪ್ಲೋರರ್‌ನಲ್ಲಿ ಅತ್ಯುತ್ತಮ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನೇರವಾಗಿ ಬಳಸಬಹುದು. ಹೀಗಾಗಿ ಇಂಟರ್ನೆಟ್ ಎಕ್ಸ್ ಪ್ಲೋರರ್‌ಗೆ ಹೊಂದಿಕೊಂಡಿರುವ ಹಿರಿಯ ಕಂಪ್ಯೂಟರ್ ಬಳಕೆದಾರರು ಮೈಕ್ರೋಸಾಫ್ಟ್ ಎಡ್ಜ್ (Microsoft Edge) ನಲ್ಲಿ ಅದೇ ಸೇವೆಯನ್ನು ಪಡೆಯಬಹುದು ಎಂದು ಮೈಕ್ರೋಸಾಫ್ಟ್ (Microsoft)ತಿಳಿಸಿದೆ. ಇದನ್ನೂ ಓದಿ : – ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಯ್ಕೆ- ದೀದಿ ಕರೆದ ಸಭೆಗೆ TRS ಗೈರು