ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ಅವರನ್ನು ಐಪಿಎಲ್ 2022 ಆವೃತ್ತಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಶ್ರೇಯಸ್ ಅಯ್ಯರ್ ಅವರನ್ನು ಇತ್ತೀಚೆಗೆ ಐಪಿಎಲ್ ಹರಾಜಿನಲ್ಲಿ 12.25 ಕೋಟಿ ರೂ.ಗೆ ಖರೀದಿಸಿದ ಕೆಕೆಆರ್ ತಂಡ ಮಂಗಳವಾರ ತಂಡದ ನಾಯಕನನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಶ್ರೇಯಸ್ ಅಯ್ಯರ್ ಗರಡಿಯಲ್ಲಿ ತಂಡ 2020ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿತ್ತು. 2021ರ ಆವೃತ್ತಿ ಮಧ್ಯದಲ್ಲಿ ಅಯ್ಯರ್ ಗಾಯಗೊಂಡು ಟೂರ್ನಿ ಮಧ್ಯದಲ್ಲೇ ಹೊರಗುಳಿಯಬೇಕಾಗಿತ್ತು.