ಕಳ್ಳರಿಗೆ ಅಧಿಕಾರ ಚುಕ್ಕಾಣಿಯನ್ನು ನೀಡುವುದಕ್ಕಿಂತ ಪರಮಾಣು ಬಾಂಬ್ ಹಾಕುವುದು ಉತ್ತಮ ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಹಾಗೂ ನೂತನ ಸರ್ಕಾರದ ಬಗ್ಗೆ ವಿಚಿತ್ರವಾದ ಹೇಳಿಕೆಯನ್ನು ನೀಡಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಅಧ್ಯಕ್ಷರು ಕೂಡ ದೇಶವನ್ನು ಲೂಟಿ ಮಾಡುತ್ತಿರುವುದನ್ನು ನೋಡಿ ಆಘಾತಕ್ಕೆ ಒಳಗಾಗಿದ್ದೇನೆ. ಇಂತಹವರಿಗೆ ಅಧಿಕಾರ ಹಸ್ತಾಂತರಿಸುವುದಕ್ಕಿಂತ ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ಹಾಕುವುದು ಉತ್ತಮ ಎಂದು ಹೇಳಿದರು. ಇದನ್ನೂ ಓದಿ : – ತ್ರಿಪುರಾ ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇವ್ ರಾಜೀನಾಮೆ
ಹಿಂದಿನ ಆಡಳಿತಗಾರರ ಭ್ರಷ್ಟಾಚಾರದ ಕಥೆಗಳನ್ನು ಹೇಳುವ ಪ್ರಬಲ ವ್ಯಕ್ತಿಗಳು ಇತರರ ವಿರುದ್ಧ ಆರೋಪಗಳನ್ನು ಮಾಡುವ ಬದಲಿಗೆ ತಮ್ಮ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಚಿಂತಿಸಬೇಕು ಎಂದ ಅವರು ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಳ್ಳರು ಪ್ರತಿಯೊಂದು ಸಂಸ್ಥೆ ನ್ಯಾಯಾಂಗ ವ್ಯವಸ್ಥೆಯನ್ನು ನಾಶ ಪಡಿಸುತ್ತಿದ್ದಾರೆ. ಈ ಬಗ್ಗೆ ಯಾವ ಅಧಿಕಾರಿಯೂ ಪ್ರಕರಣದ ತನಿಖೆ ಮಾಡಲಾಗುವುದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ : – ರಮ್ಯಾ ಪಕ್ಷ ಬಿಟ್ಟು ಹೋಗಿಲ್ಲ, ಯಾವಾಗ ಬೇಕಾದ್ರೂ ಸಂಘಟನೆಗೆ ಬರಬಹುದು – ಎಂಎಲ್ಸಿ ರಾಜೇಂದ್ರ