ಹಿಜಾಬ್ ವಿಚಾರವಾಗಿ ಹೈಕೋರ್ಟ್ ನಿಂದ ಹೀಗಾಗಲೇ ತೀರ್ಪು ಬಂದಿದೆ. ದೇಶದೆಲ್ಲೆಡೆ ತೀರ್ಪನ್ನು ಸ್ವಾಗತ ಮಾಡಿದ್ದೇವೆ. ಆದರೂ ಕೆಲ ಕಿಡಿಗೇಡಿಗಳು ರಾಷ್ಟ್ರ ವಿರೋಧಿಗಳು ಇಂದು ಕರ್ನಾಟಕ ಬಂದ್ ಗೆ ಕರೆ ಕೊಟ್ಟಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಂವಿಧಾನದವನ್ನ ಬುಡಮೇಲು ಮಾಡುವ ಕ್ರಿಯೆ ಇದು. ಕೋರ್ಟ್ ತೀರ್ಪು ಬಗ್ಗೆ ಇವರಿಗೆ ಎಷ್ಟು ಗೌರವ ಇದೆ ಇದರಲ್ಲೇ ತಿಳಿಯುತ್ತೆ. ಇದರ ಹಿಂದೆ ಯಾವ ಪೊಲಿಟಿಕಲ್ ಪಾರ್ಟಿ ಇದೆ ಎಂದು ಎಲ್ಲರಿಗೂ ಗೊತ್ತಿದೆ. ತೀರ್ಪು ವಿರೋಧಿಸಿ ಪ್ರತಿಭಟನೆ ಮಾಡುವುದು ಕಾನೂನು ಬಾಹಿರ. ಸರ್ಕಾರ ಇದನ್ನ ಮಟ್ಟಹಾಕುತ್ತೆ ಎಂದು ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
0 90 Less than a minute