ನಾಳೆ ದಿವಂಗತ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬ. ಈ ದಿನವೇ ಜೇಮ್ಸ್ ಚಿತ್ರ ಬಿಡುಗಡೆಯಾಗಲಿದೆ. ಆದ್ರೆ ಮಧ್ಯರಾತ್ರಿ1:30ಕ್ಕೆ ಆರಂಭವಾಗ ಬೇಕಿದ್ದ ಶೋ ಗಳು ಕ್ಯಾನ್ಸಲ್ ಆಗಿದೆ. ರಾಜ್ಯಾದ್ಯಂತ ಬೆಳಗ್ಗೆ 6 ಗಂಟೆಗೆ ಜೇಮ್ಸ್ ಮೊದಲ ಪ್ರದರ್ಶನ ಆರಂಭವಾಗಲಿದೆ. ರಾಜ್ಯದಲ್ಲಿ ನಾಳೆ ಬಂದ್ ಮಾಡುವಂತೆ ಹಲವು ಮುಸ್ಲಿಂ ಸಮುದಾಯದವರು ಕರೆ ಕೊಟ್ಟಿದ್ದಾರೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಮಧ್ಯರಾತ್ರಿ ಶೋಗಳನ್ನು ಕ್ಯಾನ್ಸಲ್ ಮಾಡಲಾಗಿದೆ. ನಾಳೆ ಬೆಳಗ್ಗೆ 6 ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಆದರೆ, ರಾಜ್ಯಾದ್ಯಂತ ಈಗಾಗಲೇ ತಡರಾತ್ರಿ ಶೋಗಳು ಬುಕ್ ಆಗಿದ್ದು, ಅಭಿಮಾನಿಗಳು ಜೇಮ್ಸ್ ಸಿನಿಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದರು.
ಜೇಮ್ಸ್ ಚಿತ್ರ ಬಿಡುಗಡೆ ಹಿನ್ನಲೆಯಲ್ಲಿ, ನಾಳೆ ಮಮೈಸೂರಿನ ಸೂ ಬಿಎಂಹೆಚ್ ಮಾಲ್ ಮೇಲೆ ಹೆಲಿಕಾಪ್ಟರ್ ಹಾರಾಟಕ್ಕೆ ಅನುಮತಿ ನೀಡಲಾಗಿದೆ. ಮೈಸೂರಿನ ಜಯಲಕ್ಷ್ಮಿ ಪುರಂ ನಲ್ಲಿ ಇರುವ ಮಾಲ್ನಲ್ಲಿ ಅಪ್ಪು ಅಭಿಮಾನಿಗಳು ಹೆಲಿಕಾಪ್ಟರ್ ಮೂಲಕ ಪುನೀತ್ ರಾಜ್‍ಕುಮಾರ್ ಕಟೌಟ್ ಗೆ ಪುಷ್ಬಾರ್ಚನೆ ಮಾಡಲಿದ್ದಾರೆ.ನಾಳೆ ಬೆಳಿಗ್ಗೆ ೧೧ ಗಂಟೆಗೆ ಪುಷ್ಬಾರ್ಚನೆ ಕಾರ್ಯ ನಡೆಯಲಿದೆ ಅಪ್ಪು ಉತ್ಸವ ಹೆಸರಿನ ಪುಷ್ಬಾರ್ಚನೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಸಹ ಅನುಮತಿ ನೀಡಿದೆ
ಅಪ್ಪನ ಕೊನೆಯ ಚಿತ್ರ ಜೇಮ್ಸ್ ಸಿನಿಮಾವನ್ನು ಇಂದು ಮಧ್ಯರಾತ್ರಿಯೇ ಅಪ್ಪು ಹಿರಿಯ ಪುತ್ರಿ ಧೃತಿ ನೋಡಲಿದ್ದಾರೆ. ಅಮೆರಿಕಾದಲ್ಲಿರುವ ಅಪ್ಪು ಪುತ್ರಿ ಇಂದು ರಾತ್ರಿಯೇ ಜೇಮ್ಸ್ ಚಿತ್ರ ನೋಡಲಿದ್ದಾರೆ. ಅಮೆರಿಕಾದ ಧೃತಿ ನಿವಾಸದಲ್ಲಿಯೇ ಸಿನಿಮಾ ನೋಡಲು ವ್ಯವಸ್ಥೆ ಮಾಡಲಾಗಿದೆ.
ಈ ನಡುವೆ ಐಟಿ ಕಂಪನಿಗಳ ನೌಕರರು ಮಾರ್ಚ್ 17ರಂದು ರಜೆ ಕೋರಿ ಮನವಿ ಪತ್ರ ಸಲ್ಲಿಸಿದ್ದಾರೆ. ನಾಳೆ ಅಪ್ಪು ಬಾಸ್ ನೋಡಲು ಹೋಗಲೇಬೇಕು ರಜೆ ಕೊಡಿ ಎಂದು ಬರೆದಿರುವ ಪತ್ರಗಳು ಸಖತ್ ವೈರಲ್ ಆಗುತ್ತಿದೆ.